27 ಕೋಟಿಗೆ ಲಕ್ನೋ ಪಾಲಾದ ಪಂತ್

0
28

ಹುಬ್ಬಳ್ಳಿ: ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ರಿಷಬ್ ಪಂತ್ ದುಬಾರಿ ಆಟಗಾರ ಎನ್ನುವ ದಾಖಲೆ ಬರೆದಿದ್ದಾರೆ.
ಬರೋಬ್ಬರಿ 27 ಕೋಟಿ ರೂಪಾಯಿಗೆ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪಾಲಾಗಿದ್ದಾರೆ. ಆಕ್ಷನ್‌ನಲ್ಲಿ ರಿಷಭ್ ಹೆಸರು ಕೇಳಿಬರುತ್ತಿದ್ದಂತೆ ಕೂಗಾಟ ಶುರು ಮಾಡಿದ ಅಭಿಮಾನಿಗಳು, ಪಂತ್‌ಗೆ ಭಾರೀ ಬೆಂಬಲ ಸೂಚಿಸಿದರು.
ಈ ವೇಳೆ ಭರ್ಜರಿ ಬಿಡ್ಡಿಂಗ್‌ಗೆ ಇಳಿದ ಬಹುತೇಕ ಫ್ರಾಂಚೈಸಿಗಳು, ಭಾರೀ ಹಣಾಹಣಿ ನಡೆಸಿದವು. ಆರಂಭದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೂಡ ಎಲ್‌ಎಸ್‌ಜಿ ಜತೆ ಜಿದ್ದಿಗೆ ಬಿದ್ದಂತೆ ಸ್ಪರ್ಧೆ ಮಾಡಿತು. ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಖನೌ ಸೂಪರ್ ಜೈಂಟ್ಸ್ ನಡುವೆ ಅಂತಿಮವಾಗಿ ಪೈಪೋಟಿ ನಡೆದು ಎಲ್‌ಎಸ್‌ಜಿ ಬಿಡ್ ಮೊತ್ತವನ್ನು 27 ಕೋಟಿ ರೂಪಾಯಿಗೆ ಏರಿಸಿದ್ದರಿಂದ ಡೆಲ್ಲಿ ಕ್ಯಾಪಿಟಲ್ಸ್ ಹಿಂದೆ ಸರಿಯಿತು. ಅಂತಿಮವಾಗಿ ಎಲ್‌ಎಸ್‌ಜಿ 27 ಕೋಟಿ ರೂ.ಗೆ ರಿಷಬ್‌ರನ್ನು ಖರೀದಿ ಮಾಡಿಕೊಂಡಿತು.

Previous articleಉಪಚುನಾವಣೆ ಸೋಲಿಗೆ ಯತ್ನಾಳ್ ಹರಕುಬಾಯಿ ಕಾರಣ
Next articleಪಕ್ಷಿಕೆರೆ ಒಂದೇ ಕುಟುಂಬದ ಮೂವರು ಸಾವು ಪ್ರಕರಣ: ತಾಯಿ, ಮಗಳಿಗೆ ಜಾಮೀನು