Home Advertisement
Home ನಮ್ಮ ಜಿಲ್ಲೆ 27 ಕುರಿಗಳ ನಿಗೂಢ ಸಾವು

27 ಕುರಿಗಳ ನಿಗೂಢ ಸಾವು

0
79
ಕುರಿ

ಬೆಳಗಾವಿ(ರಾಮದುರ್ಗ): ತಾಲೂಕಿನ ಮನಿಹಾಳ ಗ್ರಾಮದಿಂದ ರಾಮದುರ್ಗದತ್ತ ಬರುತ್ತಿದ್ದ ಹಿಂಡಿನಲ್ಲಿದ್ದ 27 ಕುರಿಗಳು ಕಳೆದ ಭಾನುವಾರ ರಾತ್ರಿ ನಿಗೂಢ ಸಾವನ್ನಪ್ಪಿವೆ.
ಹಿಂಡಿನಲ್ಲಿ ಒಟ್ಟು 100 ಕುರಿಗಳಿದ್ದವು. ಇವು ಚಿಲಮೂರಿನ ವಿಠ್ಠಲ ಲಕ್ಕಪ್ಪ ಸನದಿ ಎಂಬುವವರಿಗೆ ಸೇರಿದ್ದು, ಮನಿಹಾಳ ಗ್ರಾಮದ ಶೇಖರಯ್ಯ ಬೂದಿಹಾಳ ಫಾರ್ಮ್ನಲ್ಲಿ ತಂಗಿದ್ದ ವೇಳೆ ಕುರಿಗಳು ಸಾಮೂಹಿಕವಾಗಿ ಸಾವು ಕಂಡಿವೆ.
ಸಾವಿಗೆ ಕಾರಣ ತಿಳಿದುಬಂದಿಲ್ಲ. ನಿಗೂಢ ಕಾಯಿಲೆಗೇನಾದರೂ ಬಲಿಯಾಗಿವೆಯೇ ಅಥವಾ ವಿಷಯುಕ್ತ ವಸ್ತುಗಳ ಸೇವನೆಯಾಗಿದೆಯೆ ಎಂಬ ಬಗ್ಗೆ ಎಲ್ಲ ಆಯಾಮಗಳಲ್ಲಿ ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೋಮವಾರ ಅವುಗಳನ್ನು ಸಾಮೂಹಿವಾಗಿ ಅಂತ್ಯಸಂಸ್ಕಾರ ಮಾಡಲಾಯಿತು.

Previous articleಹಳ್ಳಿ ಹಳ್ಳಿಗೂ ಭೇಟಿ ನೀಡಿದ ಎಚ್.ಡಿ. ಕುಮಾರಸ್ವಾಮಿ
Next articleಭ್ರಷ್ಟಾಚಾರದಲ್ಲಿ ಕಾಂಗ್ರೆಸ್ ನಾಯಕರಿಗೆ ಪಿಎಚ್‌ಡಿ: ಸಿಎಂ