ಹುಬ್ಬಳ್ಳಿ: ವಿದ್ಯಾನಗರದ ಬಿ.ವಿ. ಭೂಮರಡ್ಡಿ ಕ್ಯಾಂಪಸ್‌ನಲ್ಲಿರುವ ಕೆಎಲ್‌ಇ ಪಾಲಿಟೆಕ್ನಿಕ್ (ಸಿ.ಐ. ಮುನವಳ್ಳಿ ಪಾಲಿಟೆಕ್ನಿಕ್) ಕಾಲೇಜಿನ ಹಳೇಯ ವಿದ್ಯಾರ್ಥಿಗಳು ಮೇ 25ರಂದು ಗುರುವಂದನ ಹಾಗೂ `ಬ್ಯಾಕ್ ಟು ಕ್ಯಾಂಪಸ್’ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ ಎಂದು ಪಾಲಿಟೆಕ್ನಿಕ್ ಕಾಲೇಜು ಪ್ರಾಚಾರ್ಯ ಪ್ರೊ. ವಿರೇಶ ಅಂಗಡಿ ಹೇಳಿದರು.
ಗುರುವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 1996 ರಿಂದ 2020ರ ವರೆಗಿನ ವಿವಿಧ ಬ್ಯಾಚ್‌ಗಳ ವಿದ್ಯಾಥಿರ್ಗಳು ಸೇರಿ ಹಳೇ ವಿದ್ಯಾಥಿರ್ಗಳ ಸಮ್ಮೀಲನ ಕಾರ್ಯಕ್ರಮ ಮಾಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ 50ಕ್ಕೂ ಹೆಚ್ಚು ನಿವೃತ್ತ ಪ್ರಾಧ್ಯಾಪಕರು ಸೇರಿ ಸುಮಾರು 130 ಸಿಬ್ಬಂದಿಗೆ ಸನ್ಮಾನ ಮಾಡಲಾಗುತ್ತಿದೆ ಎಂದರು.
ಅಂದು ಬೆಳಗ್ಗೆ 7ಕ್ಕೆ ಪಾಲಿಟೆಕ್ನಿಕ್‌ನಲ್ಲಿ ಸರಸ್ವತಿ ಪೂಜೆ ನಂತರ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗುತ್ತದೆ. ಬೆಳಗ್ಗೆಯಿಂದ ಸಂಜೆಯವರೆಗೂ ವೈವಿದ್ಯಮಯ ಕಾರ್ಯಕ್ರಮಗಳು ನಡೆಯಲಿವೆ. ಉತ್ತರ ಕರ್ನಾಟಕ ಶೈಲಿಯ ಊಟದ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ 9.15ಕ್ಕೆ ಪಾಲಿಟೆಕ್ನಿಕ್‌ನಿಂದ ಕಾರ್ಯಕ್ರಮ ನಡೆಯುವ ಬಯೋಟೆಕ್ ಹಾಲ್ ವರೆಗೆ ಮೆರವಣಿಗೆ ನಡೆಯಲಿದೆ ಎಂದರು.
ಪಾಲಿಟೆಕ್ನಿಕ್ ಹಳೇ ವಿದ್ಯಾರ್ಥಿ, ಬೆಂಗಳೂರಿನ ಡಿಆರ್‌ಡಿಒ ಪ್ರೊಜೆಕ್ಟ್ ಡೈರೆಕ್ಟರ್, ಹಿರಿಯ ವಿಜ್ಞಾನಿ ಮಲ್ಲಿಕಾರ್ಜುನ ಉಪ್ಪಾರ, ಮುಧೋಳದ ನಿರಾಣಿ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕ ಸಂಗಮೇಶ ನಿರಾಣಿ, ಕೆಎಲ್‌ಇ ನಿರ್ದೇಶಕ ಶಂಕರಣ್ಣ ಮುನವಳ್ಳಿ ಅತಿಥಿಗಳಾಗಿ ಪಾಲ್ಗೊಳ್ಳುವರು.
ಮಧ್ಯಾಹ್ನ 2.30 ರಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸನ್ಮಾನ ನಡೆಯಲಿದೆ. ಸಮಾವೇಶದಲ್ಲಿ ಸುಮಾರು 500ಕ್ಕೂ ಹೆಚ್ಚು ಹಳೇ ವಿದ್ಯಾರ್ಥಿಗಳು ಸೇರುವ ನಿರೀಕ್ಷೆ ಇದೆ. ಪ್ರಸ್ತುತ ಪಾಲಿಟೆಕ್ನಿಕ್‌ನಲ್ಲಿ ಏಳು ವಿಭಾಗಗಳಿದ್ದು, ಸುಮಾರು 1400 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಇವರಿಗೆ ಸಮಾವೇಶದಿಂದ ಪ್ರೇರಣೆ ಸಿಗಲಿದೆ ಎಂದು ಪ್ರೊ. ಅಂಗಡಿ ತಿಳಿಸಿದರು.
ಪ್ರತಿ ವರ್ಷ ಅನೇಕ ಕ್ಯಾಂಪಸ್ ಸಂದರ್ಶನಗಳ ಮೂಲಕ ಇಲ್ಲಿ ಕಲಿತವರಿಗೆ ಮಾತ್ರವಲ್ಲ, ಬೇರೆ ಪಾಲಿಟೆಕ್ನಿಕ್‌ನಲ್ಲಿ ಓದಿದ ಅಭ್ಯಥಿರ್ಗಳಿಗೆ ಸಂದರ್ಶನದಲ್ಲಿ ಪಾಲ್ಗೊಳ್ಳಲು ವೇದಿಕೆ ಕಲ್ಪಿಸಲಾಗಿದೆ. ಇಲ್ಲಿ ಮೂಲ ಸೌಕರ್ಯ ಇರುವುದರಿಂದ ಕಂಪನಿಗಳು ಕ್ಯಾಂಪಸ್ ಸಂದರ್ಶನಕ್ಕೆ ಪ್ರಾಶಸ್ತ್ಯ ನೀಡುತ್ತಿವೆ ಎಂದರು.
ಕೆ.ಸಿ. ಅಳಗುಂಡಗಿ, ಸಂತೋಷ ಕಂಠಿ, ನಿಖಿಲೇಶ ಕುಂದಗೋಳ, ವಿಜಯಲಕ್ಷ್ಮೀ ವಿಭೂತಿ, ಸುಧೀರ ಹೊಸಮನಿ, ಶಿವಾನಂದ ದಂಡಾವತಿಮಠ, ಪ್ರವಿಣ ಕುಂದಗೋಳ, ಶ್ರೀನಿವಾಸ ಗೋಡಿ, ಶ್ರೀಕಾಂತ ಸೊಗಲದ ಇತರರು ಇದ್ದರು.