Home Advertisement
Home ತಾಜಾ ಸುದ್ದಿ 24ರಂದು ಮುತ್ತುಸ್ವಾಮಿ ದೀಕ್ಷಿತರ ಆರಾಧನಾ ಸಂಗೀತೋತ್ಸವ

24ರಂದು ಮುತ್ತುಸ್ವಾಮಿ ದೀಕ್ಷಿತರ ಆರಾಧನಾ ಸಂಗೀತೋತ್ಸವ

0
64

ಬೆಂಗಳೂರು: ರಾಜಧಾನಿಯ ಶ್ರೀ ಅನುಗ್ರಹ ಸಂಗೀತ ಮಹಾವಿದ್ಯಾಲಯ ನ. 24ರಂದು ಬನಶಂಕರಿ ಒಂದನೇ ಹಂತದ(ಪಿಇಎಸ್ ಪದವಿ ಕಾಲೇಜು ಪಕ್ಕದ) ಸ್ವಾಮಿ ವಿವೇಕಾನಂದ ಶಾಲೆ ಸಭಾಂಗಣದಲ್ಲಿ ಶ್ರೀಮುತ್ತುಸ್ವಾಮಿ ದೀಕ್ಷಿತರ ಆರಾಧನಾ ಮಹೋತ್ಸವ ಮತ್ತು ಕನಕದಾಸರ ಜಯಂತಿ ನಿಮಿತ್ತ ವಿಶೇಷ ಗಾಯನ-ವಾದನ ಕಛೇರಿಗಳನ್ನು
ಹಮ್ಮಿಕೊಂಡಿದೆ.
ಮಧ್ಯಾಹ್ನ 3:30ಕ್ಕೆ ಕಾರ್ಯಕ್ರಮವನ್ನು ಶ್ರೀಅನುಗ್ರಹ ಸಂಗೀತ ಮಹಾವಿದ್ಯಾಲಯದ ಪೋಷಕರು ಮತ್ತು ಕಸೂತಿ ಕಲಾವಿದೆ ಸುಧಾಮಣಿ ಉದ್ಘಾಟಿಸಲಿದ್ದಾರೆ. ಹಿರಿಯ ವಿದ್ವಾಂಸ ಮತ್ತು ಪ್ರಖ್ಯಾತ ಗಾಯಕ ವಿದ್ವಾನ್ ಜೆ.ಎಸ್. ಶ್ರೀಕಂಠ ಭಟ್ ಅಧ್ಯಕ್ಷತೆ ವಹಿಸುವರು. ನಂತರ ಮುತ್ತುಸ್ವಾಮಿ ದೀಕ್ಷಿತರ ನೊಟ್ಟುಸ್ವರ ಗೋಷ್ಠಿ ಗಾಯನ ನಡೆಯಲಿದೆ.
ಈ ಸಂದರ್ಭ 15 ವೀಣಾ ಕಲಾವಿದರಿಂದ ಏಕಾದಶ ವೀಣಾ ವಾದನ, ವಯೋಲಿನ್‌ನಲ್ಲಿ ಚೈತ್ರಾ ಶ್ರೀಧರ್ ನೊಟ್ಟುಸ್ವರ ವಾದನ ಮತ್ತು ವಿದ್ಯಾಲಯದ ಕಿರಿಯ ವಿದ್ಯಾರ್ಥಿಗಳಿಂದ ನೊಟ್ಟುಸ್ವರ ಗಾಯನ ವಿಶೇಷವಿದೆ. ದಾಸರಪದ ಕಲಿಕಾ ಶಿಬಿರಾರ್ಥಿಗಳಿಂದ ಮತ್ತು ವಿದ್ಯಾಲಯದ ವಿದ್ಯಾರ್ಥಿಗಳಿಂದ ಕನಕದಾಸ ಕೃತಿಗಳ ಗಾಯನವಿದೆ.
ವಿದ್ವಾಂಸರ ಕಛೇರಿ: ಸಂಜೆ 7ಕ್ಕೆ ವಿದ್ವಾನ್ ಸುಬ್ಬಕೃಷ್ಣ ಮತ್ತು ವಿದ್ವಾನ್ ನಿರಂಜನ ಯಡಿಯಾಳ ಅವರು ಶ್ರೀ ಮುತ್ತುಸ್ವಾಮಿ ದೀಕ್ಷಿತರ ಕೃತಿಗಳನ್ನು ಆಧರಿಸಿ ವಿಶೇಷ ಸಂಗೀತ ಕಛೇರಿ ಪ್ರಸ್ತುತಪಡಿಸಲಿದ್ದಾರೆ.
ಕೊಳಲು ವಾದನ: ರಾತ್ರಿ 7:30ಕ್ಕೆ ವಿದ್ವಾಂಸ ಶಶಾಂಕ ಚಿನ್ಯ ಅವರಿಂದ ಕೊಳಲು ವಾದನ ಇದೆ.
ಪಕ್ಕವಾದ್ಯ: ವಿದ್ವಾಂಸರಾದ ಅಭಯ್ ಸಂಪಿಗೆತ್ತಾಯ(ಪಿಟೀಲು), ಶಿವಮೊಗ್ಗ ನಿಖಿಲ್ ಕುಮಾರ್(ಮೃದಂಗ), ವಿದುಷಿಯರಾದ ಬಿ.ಜಿ. ರಮಾ, ದೀಪ್ತಿ ಮತ್ತು ಧನ್ಯಶ್ರೀ (ವೀಣೆ) ಪಕ್ಕವಾದ್ಯ ಸಾಥ್ ನೀಡಲಿದ್ದಾರೆ ಎಂದು ವಿದ್ಯಾಲಯದ ಪ್ರಾಚಾರ್ಯ ವಿದ್ವಾನ್ ಜೆ.ಎಸ್. ಶ್ರೀಕಂಠ ಭಟ್ ತಿಳಿಸಿದ್ದಾರೆ.

Previous articleಹಣದ ಹೊಳೆ ಹರಿಸಿ ಸಾಧಿಸಿದ ಗೆಲುವು
Next articleಉಪಚುನಾವಣೆ ಫಲಿತಾಂಶ: ಗ್ಯಾರಂಟಿ ಮತ್ತು ಅಭಿವೃದ್ಧಿಗೆ ಕೈಗನ್ನಡಿಯಾಗಿದೆ