Home Advertisement
Home ನಮ್ಮ ಜಿಲ್ಲೆ 21 ಸಕ್ಕರೆ ಕಾರ್ಖಾನೆಗಳ ಮೇಲೆ ದಿಢೀರ್‌ ದಾಳಿ

21 ಸಕ್ಕರೆ ಕಾರ್ಖಾನೆಗಳ ಮೇಲೆ ದಿಢೀರ್‌ ದಾಳಿ

0
122

ಬೆಳಗಾವಿ: ಉತ್ತರ ಕರ್ನಾಟಕದ 21 ಸಕ್ಕರೆ ಕಾರ್ಖಾನೆಗಳ ಮೇಲೆ ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಆಯುಕ್ತ ಶಿವಾನಂದ ಕಲಕೇರಿ ನೇತೃತ್ವದಲ್ಲಿ ದಿಢೀರ್ ದಾಳಿ ನಡೆದಿದೆ. ಕಬ್ಬು ಬೆಳೆಯುವ ರೈತರಿಗೆ ತೂಕದಲ್ಲಿ ಕಾರ್ಖಾನೆಗಳಿಂದ ಮೋಸವಾಗುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು.
ಬೆಳಗಾವಿ ಜಿಲ್ಲೆಯ 8, ಬಾಗಲಕೋಟೆ 4, ವಿಜಯಪುರ 4, ಕಲಬುರಗಿ, ಬೀದರ್​ ಜಿಲ್ಲೆಯ 2, ಕಾರವಾರದ ಒಂದು ಕಾರ್ಖಾನೆಯ ಮೇಲೆ ಬೆಳಗ್ಗೆ 7 ಗಂಟೆಯಿಂದ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸತೀಶ ಜಾರಕಿಹೊಳಿ ಮಾಲೀಕತ್ವದ ಬೆಳಗಾಂ ಶುಗರ್ಸ್, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮಾಲೀಕತ್ವದ ಹರ್ಷ ಶುಗರ್ಸ್, ಕತ್ತಿ ಸಹೋದರ ಮಾಲೀಕತ್ವದ ವಿಶ್ವರಾಜ್ ಶುಗರ್ಸ್, ಸಚಿವ ಮುರುಗೇಶ ನಿರಾಣಿ ಮಾಲೀಕತ್ವದ ನಿರಾಣಿ ಶುಗರ್ಸ್ ಸೇರಿದಂತೆ ಹಲವು ಕಾರ್ಖಾನೆಗಳಲ್ಲಿ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ

Previous articleತೊಗರಿಗೆ ನೆಟೆ ರೋಗ, ವಿಶೇಷ ಪ್ಯಾಕೇಜ್ ಘೋಷಣೆಗೆ ಕಾಂಗ್ರೆಸ್‌ ಮುಖಂಡರ ಒತ್ತಾಯ
Next articleಜನಾಕ್ರೋಶಕ್ಕೆ ನರಿ ಬಲಿ