2072ಕ್ಕೆ ಕಾಯ್ದಿರಿಸಿದ ಗುರು ಚಿತ್ರ

0
13

ಬೆಂಗಳೂರು: ಇಂದು ಬಿಡುಗಡೆಯಾಗಬೇಕಿದ್ದ ʼಎದ್ದೇಳು ಮಂಜುನಾಥ 2ʼ ಚಿತ್ರ 2072ಕ್ಕೆ ಬಿಡುಗಡೆಯಾಗಲಿದೆ.
ಹೌದು. ಅಚ್ಚರಿ ಎನಿಸಿದರೂ ಇದು ಸತ್ಯ!! ಗುರುಪ್ರಸಾದ್​ ಪತ್ನಿ ಸುಮಿತ್ರಾ, ಸಿನಿಮಾ ರಿಲೀಸ್​ ಮಾಡದಂತೆ ಸ್ಟೇ ತಂದಿದ್ದರಿಂದ ಅವರ ನಡೆಗೆ ನಿರ್ಮಾಪಕ ಮೈಸೂರು ರಮೇಶ್ ಅಸಮಾಧಾನಗೊಂಡಿದ್ದಾರೆ. ಈ ಬಗ್ಗೆ ಪ್ರೇಕ್ಷಕರಿಗೆ ಸಂದೇಶ ರವಾನಿಸಿದ್ದಾರೆ. ‘ಪ್ರಿಯ ಸಿನಿಮಾ ಅಭಿಮಾನಿಗಳೆ, ಗುರುಪ್ರಸಾದ್ ಅವರ ಕೊನೆಯ ಸಿನಿಮಾ “ಎದ್ದೇಳು ಮಂಜುನಾಥ 2” ಚಿತ್ರಮಂದಿರಗಳಲ್ಲಿ ಪ್ರದರ್ಶನಕ್ಕಾಗಿ ತಯಾರಿ ನಡೆಸಿದ್ದೆವು, ಅವರ ಧರ್ಮಪತ್ನಿಯ ಸ್ವಇಚ್ಛೆಯಂತೆ ಸಿನೆಮಾವನ್ನು ಕೊನೆಯ ಕ್ಷಣದಲ್ಲಿ ಪ್ರದರ್ಶನ ಮಾಡದಂತೆ ಅವರು ನ್ಯಾಯಾಲಯದ ಮೊರೆ ಹೋಗಿರುವುದರಿಂದ ಸದರಿ ಸಿನಿಮಾವನ್ನು ನಿಮ್ಮ ಮುಂದೆ ತರಲು ವಿಫಲರಾಗಿದ್ದೇವೆ. ಗುರು ಪ್ರಸಾದ್ ಅವರ 100ನೇ ಜನ್ಮದಿನದಂದು ರಿಲೀಸ್ ಮಾಡಲು ಈ ಚಿತ್ರವನ್ನು ಕಾಯ್ದಿರಿಸಿದ್ದೇವೆ’ ಎಂದಿದ್ದಾರೆ.

ಸಿನಿ ಪ್ರಿಯರ ಆಶಯ: ಗುರುಪ್ರಸಾದ್ ಅವರು ನವೆಂಬರ್ ೨, ೧೯೭೨ರಲ್ಲಿ ಕನಕಪುರದಲ್ಲಿ ಜನಿಸಿದ್ದು ಅವರ 100ನೇ ಜನುಮದಿನ ಅಂದರೆ, 2072ಕ್ಕೆ ಚಿತ್ರ ಬಿಡುಗಡೆಯಾಗಬಹದು ಎನ್ನಲಾಗಿದೆ. ಆದರೆ ನ್ಯಾಯಾಲಾಯದಲ್ಲಿ ಎಲ್ಲ ಬಗೆಹರಿದು ಗುರುಪ್ರಸಾದ್ ಅವರ ಕೊನೆಯ ಸಿನಿಮಾ “ಎದ್ದೇಳು ಮಂಜುನಾಥ 2” ಚಿತ್ರಮಂದಿರಗಳಲ್ಲಿ ಪ್ರದರ್ಶನವಾಗಿ ಯಶಸ್ಸು ಕಾಣಲೆಂದು ಸಿನಿ ಪ್ರಿಯರ ಆಶಯ.

Previous articleಜೋಶಿ ನಿವಾಸದಲ್ಲಿ ರೆಡ್ಡಿ ಪ್ರತ್ಯಕ್ಷ
Next articleಕುಂಭಮೇಳಕ್ಕೆ ತೆರಳಿದ 5 ಜನ ಸಾವು : ಮೃತದೇಹ ತರಲು ಅಗತ್ಯ ಕ್ರಮ