ಬೆಂಗಳೂರು: ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಬೆಂಗಳೂರಿನ ಅಭಿವೃದ್ಧಿಯಂತೂ ಸಂಪೂರ್ಣ ಕಡೆಗಣಿಸಿದ ಪರಿಣಾಮವಾಗಿ ಮಳೆಬಂದಾಗಲೆಲ್ಲಾ ನಿತ್ಯ ನರಕದ ಪರಿಸ್ಥಿತಿ ಬಂದೊದಗಿಸಿ ಜನಸಾಮಾನ್ಯರು ನಿತ್ಯವೂ ಯಾತನೆ ಅನುಭವಿಸುವಂತೆ ಮಾಡಿ ರಾಜಧಾನಿಯ ಗೌರವ ಕುಸಿಯುವಂತೆ ಮಾಡಿರುವುದು ದುರ್ದೈವದ ಸಂಗತಿಯಾಗಿದೆ ಬಿಜೆಪಿಯ ರಾಜ್ಯಾದ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ
ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಉಂಟಾಗಿರುವ ಹಾನಿ ಕುರಿತು ಬಿಜೆಪಿಯ ರಾಜ್ಯಾದ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಪಕ್ಷದ ಮುಖಂಡರು ಹಾನಿಗೊಳಗಾದ ಪ್ರದೇಶಗಳಿಗೆ ಇಂದು ಬೆಳಗ್ಗೆ ಭೇಟಿ ನೀಡಿ ಪರಿಶೀಲಿಸಿದ ಅವರು ಅಧಿಕಾರಕ್ಕೇರಿ ಎರಡು ವರುಷ ಕಳೆದರೂ ಒಂದೇ ಒಂದೂ ಅಭಿವೃದ್ಧಿ ಯೋಜನೆ ಜಾರಿ ಮಾಡದೇ, ಯಾವುದೇ ಆಶ್ವಾಸನೆಗಳನ್ನು ಈಡೇರಿಸದೇ, ನಿತ್ಯವೂ ಜನರ ಮೇಲೆ ಬೆಲೆ ಏರಿಕೆಯ ಬರೆ ಎಳೆದ ರಾಜ್ಯ ಸರ್ಕಾರ ಮಳೆಯಿಂದ ಸಂಕಷ್ಟಿತರಾಗಿರುವ ಜನರ ಕಷ್ಟ ಆಲಿಸುವ ಬದಲು ಆಡಂಬರದ ಜಾಹಿರಾತುಗಳು ಹಾಗೂ ಸಮಾವೇಶದ ಮೂಲಕ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿರುವುದು ಜನ ವಿರೋಧಿ ನಡೆಯಲ್ಲದೇ ಬೇರೇನೂ ಅಲ್ಲ. ಬ್ರ್ಯಾಂಡ್ ಬೆಂಗಳೂರು ಮಾಡುವುದಾಗಿ ಹೇಳಿದ್ದ ಬೆಂಗಳೂರು ಉಸ್ತುವಾರಿ ಹೊತ್ತಿರುವ ಉಪಮುಖ್ಯಮಂತ್ರಿಗಳು ಮೂಲಭೂತ ಸೌಕರ್ಯಗಳನ್ನೂ ಒದಗಿಸಲಾಗದೆ ಬೆಂಗಳೂರು ಜನರಿಗೆ ನಿತ್ಯ ನರಕ ನಗರವಾಗಿಸಿದ್ದಾರೆ. ಇನ್ನಾದರೂ ಸಂಕಷ್ಠಿತ ಜನರ ಸಮಸ್ಯೆಗಳನ್ನು ಆಲಿಸುವ ನಿಟ್ಟಿನಲ್ಲಿ ದಪ್ಪ ಚರ್ಮದ ಭ್ರಷ್ಟ ಸರ್ಕಾರ ಮುಂದಾಗಲಿ ಎಂದು ಎಚ್ಚರಿಸಿದ್ದಾರೆ.
ಈ ವೇಳೆ ವಿಧಾನಮಂಡಲದ ಉಭಯ ಸದನಗಳ ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ, ಛಲವಾದಿ ನಾರಾಯಣಸ್ವಾಮಿ, ಶಾಸಕರಾದ ಸತೀಶ್ ರೆಡ್ಡಿ, ಎನ್. ರವಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.