18 ವರ್ಷ ಮೇಲ್ಪಟ್ಟ ಪ್ರತಿ ಮಹಿಳೆಯರಿಗೆ ತಿಂಗಳಿಗೆ 1000 ರೂ

0
9

ಮುಖ್ಯಮಂತ್ರಿ ಮಹಿಳಾ ಸಮ್ಮಾನ್ ಯೋಜನೆಯಡಿ ಸರ್ಕಾರವು ಮಾಸಿಕ 1,000 ರೂಪಾಯಿ ನೀಡುವ ಘೋಷಣೆ ಮಾಡಿದೆ

ನವದೆಹಲಿ: ಮುಖ್ಯ ಮಂತ್ರಿ ಮಹಿಳಾ ಸಮ್ಮಾನ್ ಯೋಜನೆ ಅಡಿಯಲ್ಲಿ 18 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಪ್ರತಿ ಮಹಿಳೆಗೆ ಕೇಜ್ರಿವಾಲ್ ಸರ್ಕಾರವು ಮಾಸಿಕ 1,000 ರೂಪಾಯಿಗಳನ್ನು ನೀಡುತ್ತದೆ ಎಂದು ದೆಹಲಿ ವಿಧಾನಸಭೆಯಲ್ಲಿ ಬಜೆಟ್ ಮಂಡಿಸುತ್ತಿರುವ ದೆಹಲಿ ಹಣಕಾಸು ಸಚಿವ ಅತಿಶಿ ಹೇಳಿದ್ದಾರೆ. ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ತಂಗಿಯರು ಮತ್ತು ಹೆಣ್ಣು ಮಕ್ಕಳು ಮನೆಯ ಹಿರಿಯರ ಕೈಯಲ್ಲಿ ಹಣವನ್ನು ನೀಡುತ್ತಿದ್ದಾರೆ. ದೆಹಲಿಯ ಸಹೋದರಿಯರಿಗಾಗಿ ಮುಖ್ಯಮಂತ್ರಿ
ಅರವಿಂದ್ ಕೇಜ್ರಿವಾಲ್ ದೊಡ್ಡ ಹೆಜ್ಜೆ ಇಡುತ್ತಿದ್ದಾರೆ ಎಂದಿದ್ದಾರೆ. ಮುಖ್ಯಮಂತ್ರಿ ಮಹಿಳಾ ಸಮ್ಮಾನ್ ಯೋಜನೆಯಡಿ 1000 ರೂ ಘೋಷಣೆ ಮಾಡಿದ್ದಾರೆ.

Previous articleಕಾಲೇಜು ಆವರಣದಲ್ಲಿ ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ
Next articleಎಸಿಸಿ ಕಾರ್ಖಾನೆ ಕಿರುಕುಳದಿಂದ ಸಿಡಿದೆದ್ದ ಕಾರ್ಮಿಕರು..!