Home ಅಪರಾಧ 14ನೇ ಮಹಡಿಯಿಂದ ಬಿದ್ದು ಯುವಕ ಸಾವು

14ನೇ ಮಹಡಿಯಿಂದ ಬಿದ್ದು ಯುವಕ ಸಾವು

0
128

ಉಡುಪಿ: ನಗರದ ಬ್ರಹ್ಮಗಿರಿಯ ಗ್ರಾಸ್ ಲ್ಯಾಂಡ್ ದಿ ಕಾಸ್ಟ್ಲೆ ಅಪಾರ್ಟ್‌ಮೆಂಟ್ ನ 14ನೇ ಮಹಡಿಯಿಂದ ಬಿದ್ದು ಯುವಕನೋರ್ವ ಮೃತಪಟ್ಟ ಘಟನೆ ಮಂಗಳವಾರ ಸಂಭವಿಸಿದೆ.
ಮೃತ ಯುವಕನನ್ನು ಲೇಕ್ ರಾಜ್ (29) ಎಂದು ಗುರುತಿಸಲಾಗಿದೆ. ಆತ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ಆಯ ತಪ್ಪಿ ಬಿದ್ದು ಮೃತಪಟ್ಟಿರಬಹುದು ಎಂದು ಊಹಿಸಲಾಗಿದೆ. ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.