ಸಿಂದಗಿ: ತಾಲೂಕಿನ ಬಂಟನೂರ ಗ್ರಾಮದ ಜಮೀನಿನಲ್ಲಿ ಅಕ್ರಮವಾಗಿ ಬೆಳೆದಿದ್ದ 33.25 ಲಕ್ಷ ರೂ. ಮೌಲ್ಯದ 133 ಕೆಜಿ ಗಾಂಜಾ ಬೆಳೆದ ಖಚಿತ ಮಾಹಿತಿಯನ್ನು ಪಡೆದುಕೊಂಡು ಪೊಲೀಸರು ದಾಳಿ ನಡೆಸಿ ಬುಧವಾರ ಹಸಿ ಗಾಂಜಾ ವಶಪಡಿಸಿಕೊಂಡಿದ್ದಾರೆ. ಪ್ರಕರಣದ ಸಂಬಂಧ ಜಮೀನಿನ ಬಸವರಾಜ ಬಾಳಪ್ಪ ಪೂಜಾರಿ ಎಂಬಾತನನ್ನು ಬಂಧಿಸಿದ್ದಾರೆ.