107ನೇ ವಯಸ್ಸಿನಲ್ಲೂ ಕುಂದದ ಮತದಾನದ ಉತ್ಸಾಹ

0
20

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವರ ತಂದೆ ಶತಾಯುಷಿ ಮಿಜಾರುಗುತ್ತು ಆನಂದ ಆಳ್ವ ಅವರು ತಮ್ಮ 107ನೇ ವಯಸ್ಸಿನಲ್ಲೂ ಮತದಾನ ಮಾಡುವ ಮೂಲಕ ನಾಗರಿಕ ಜವಾಬ್ದಾರಿಯನ್ನು ಪೂರ್ಣಗೊಳಿಸಿ ಮಾದರಿಯಾದರು.
ಮನೆಯಿಂದಲೇ ಮತದಾನ ಮಾಡುವ ಅವಕಾಶ ಇದ್ದರೂ ಅದನ್ನು ನಿರಾಕರಿಸಿ, ತಾವೇ ಸ್ವತಃ ಮಿಜಾರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ಮತಗಟ್ಟೆಗೆ ತೆರಳಿ ಮತ ಚಲಾಯಿಸಿದರು. ಆನಂದ ಆಳ್ವರು ಈವರೆಗೂ ಎಲ್ಲಾ ಚುನಾವಣೆಯಲ್ಲಿ ತಪ್ಪದೇ ಮತದಾನ ಮಾಡಿರುವುದು ಹಲವರಿಗೆ ಮಾದರಿ.

Previous articleಹಾವೇರಿ ಶೇ. 81, ಧಾರವಾಡ ಶೇ. 73ರಷ್ಟು ಮತದಾನ
Next articleಸಿ.ಟಿ.ರವಿ ದಿಢೀರ್‌ ಆಸ್ಪತ್ರೆಗೆ ದಾಖಲು