10ಸಾವಿರ ವನರಕ್ಷಕರಿಗೆ KSDL ವತಿಯಿಂದ ಸುರಕ್ಷಾ ಕಿಟ್

ಬೆಂಗಳೂರು: ವನರಕ್ಷಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಗಮನಿಸಿ 10ಸಾವಿರ ವನರಕ್ಷಕರಿಗೆ KSDL ವತಿಯಿಂದ ಸುರಕ್ಷಾ ಕಿಟ್ ವಿತರಣೆ ಮಾಡಲಾಗುವುದು ಎಂದು ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ಮೈಸೂರು ಸ್ಯಾಂಡಲ್ ಸೋಪ್ ತಯಾರಿಕಗೆ ಅಗತ್ಯವಿರುವ ಗಂಧದ ಎಣ್ಣೆಯನ್ನು ಸಂರಕ್ಷಿಸುವಲ್ಲಿ ವನರಕ್ಷಕರ ಪಾತ್ರ ಮಹತ್ತರವಾಗಿದೆ. ಈ ಕಾಳಜಿಯಿಂದಲೇ, #KSDL ಸಂಸ್ಥೆ ತನ್ನ 2024-25ನೇ ಸಾಲಿನ ₹2 ಕೋಟಿ CSR ನಿಧಿಯಿಂದ ರಾಜ್ಯದ 10 ಸಾವಿರ ಅರಣ್ಯ ರಕ್ಷಕರು, ವೀಕ್ಷಕರು, ಮಾವುತರು, ಚಾಲಕರು ಮತ್ತು ಕಾವಾಡಿಗಳಿಗೆ ಜರ್ಕಿನ್, ಶೂ, ಬ್ಯಾಗ್, ನೀರಿನ ಬಾಟಲ್ ಒಳಗೊಂಡ ಕಿಟ್ ವಿತರಣೆ ಮಾಡುತ್ತಿದೆ.

ಈ ಯೋಜನೆಯ ಮೊದಲ ಹಂತ ಜೂನ್ 4ರಂದು ಮೈಸೂರು ಮುಕ್ತ ವಿಶ್ವವಿದ್ಯಾನಿಲಯ ಸಭಾಂಗಣದಲ್ಲಿ ನಡೆಯಲಿದ್ದು, ಚಾಮರಾಜನಗರ ಮತ್ತು ಮೈಸೂರಿನ 2,168 ಸಿಬ್ಬಂದಿಗೆ ಕಿಟ್ ವಿತರಣೆ ಮಾಡಲಾಗುವುದು. ವನ್ಯಜೀವಿ ಮಂಡಳಿ ಸದಸ್ಯರು ಹಾಗೂ ಸೊಸೈಟಿ ಫಾರ್ ಪ್ರೊಟೆಕ್ಷನ್ ಆಫ್ ಪ್ಲಾಂಟ್ಸ್ ಅಂಡ್ ಅನಿಮಲ್ಸ್ (#SPPA) ಸಂಸ್ಥಾಪಕ ಧ್ರುವ ಪಾಟೀಲ ಅವರು ಹವ್ಯಾಸಿ ವನ್ಯಜೀವಿ ಛಾಯಾಗ್ರಾಹಕರಾಗಿದ್ದು, ಪ್ರತಿಕೂಲ ಸಂದರ್ಭಗಳಲ್ಲಿ ವನರಕ್ಷಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಗಮನಿಸಿ ಈ ಯೋಜನೆ ರೂಪಿಸಲು ನೆರವಾಗಿದ್ದಾರೆ.
ಮುಂದಿನ ಹಂತಗಳಲ್ಲಿ ಉಳಿದ ಜಿಲ್ಲೆಗಳ ಸಿಬ್ಬಂದಿಗೂ ಈ ಕಿಟ್ ವಿತರಣೆ ಮಾಡಲಾಗುವುದು. ಎಂದಿದ್ದಾರೆ.