₹6,210 ಕೋಟಿ ವಂಚನೆ ಪ್ರಕರಣ: ಎಸ್ ಕೆ ಗೋಯಲ್ ಮೇ 21ರವರೆಗೆ ಇಡಿ ಕಸ್ಟಡಿಗೆ

0
12

ನವದೆಹಲಿ: ₹6,200 ಕೋಟಿಗೂ ಹೆಚ್ಚಿನ ಬ್ಯಾಂಕ್ ಸಾಲ ವಂಚನೆ ಪ್ರಕರಣದಲ್ಲಿ ಯುಕೋ ಬ್ಯಾಂಕ್​​ನ ಮಾಜಿ ಛೇರ್ಮನ್ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಸುಬೋಧ್ ಕುಮಾರ್ ಗೋಯಲ್ ಅವರನ್ನು ಬಂಧಿಸಲಾಗಿದೆ.
ಕೋಲ್ಕತ್ತಾ ಮೂಲದ ಕಂಪನಿಗೆ ಸಂಬಂಧಿಸಿದ ₹6,200 ಕೋಟಿಗೂ ಹೆಚ್ಚಿನ ಬ್ಯಾಂಕ್ ಸಾಲ ವಂಚನೆ ಪ್ರಕರಣದಲ್ಲಿ ಹಣ ವರ್ಗಾವಣೆ ಆರೋಪದ ಮೇಲೆ ಯುಕೋ ಬ್ಯಾಂಕ್‌ನ ಮಾಜಿ ಸಿಎಂಡಿ ಸುಬೋಧ್ ಕುಮಾರ್ ಗೋಯೆಲ್ ಅವರನ್ನು ಬಂಧಿಸಿರುವುದಾಗಿ ಜಾರಿ ನಿರ್ದೇಶನಾಲಯ (ED) ತಿಳಿಸಿದೆ.
ಸುಬೋಧ್ ವಿರುದ್ಧ ಮನಿ ಲಾಂಡರಿಂಗ್ (ಅಕ್ರಮ ಹಣ ವರ್ಗಾವಣೆ) ಆರೋಪ ಇದೆ. ಜಾರಿ ನಿರ್ದೇಶನಾಲಯ ಕಳೆದ ಶುಕ್ರವಾರ (ಮೇ 16) ಸುಬೋಧ್ ಅವರನ್ನು ಅವರ ದೆಹಲಿ ನಿವಾಸದಲ್ಲಿ ಬಂಧಿಸಿದೆ. ಸುಬೋಧ್ ಕುಮಾರ್ ಗೋಯಲ್ ಅವರನ್ನು ಮೇ 17, ಶನಿವಾರದಂದು ವಿಶೇಷ ಪಿಎಂಎಲ್​​ಎ ಕೋರ್ಟ್ ಮುಂದೆ ಹಾಜರುಪಡಿಸಲಾಯಿತು. ಮೇ 21, ಬುಧವಾರದವರೆಗೂ ಅವರನ್ನು ಇಡಿ ಕಸ್ಟಡಿಗೆ ಒಪ್ಪಿಸಿ ಕೋರ್ಟ್ ಆದೇಶಿಸಿತು.

Previous articleಬಮುಲ್‌ ನಿರ್ದೇಶಕರಾಗಿ ಡಿ. ಕೆ. ಸುರೇಶ್ ಅವಿರೋಧ ಆಯ್ಕೆ
Next articleದಕ್ಷಿಣ ಕನ್ನಡ ಜಿಲ್ಲೆಗೆ ಅನುದಾನ: ಶ್ವೇತಪತ್ರಕ್ಕೆ ಆಗ್ರಹ