೨೩ ವಾರ್ಡುಗಳಿಗೆ ನೀರು ಪೂರೈಸುವ ಓವರಹೆಡ್ ಟ್ಯಾಂಕ್ ನಿರ್ಮಾಣಕ್ಕೆ ಅಡ್ಡಗಾಲು : ಶಾಸಕರ ವಿರುದ್ಧ ಬಿಜೆಪಿ ಕಿಡಿ

0
24

ಇಳಕಲ್ : ನಗರದ ೩೧ ವಾರ್ಡುಗಳಲ್ಲಿ ೨೩ ವಾರ್ಡುಗಳಿಗೆ ನೀರು ಪೂರೈಕೆ ಮಾಡುವ ಓವರಹೆಡ್ ಟ್ಯಾಂಕ್ ನಿರ್ಮಾಣಕ್ಕೆ ಶಾಸಕ ವಿಜಯಾನಂದ ಕಾಶಪ್ಪನವರ ಮತ್ತು ಅವರ ಹಿಂಬಾಲಕರು ನೇರ ಕಾರಣ ಎಂದು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಕಿಡಿ ಕಾರಿದರು.
ಮಂಗಳವಾರದಂದು ಜೂನಿಯರ್ ಕಾಲೇಜು ಹತ್ತಿರದ ಟ್ಯಾಂಕ್ ನಿರ್ಮಾಣ ಮಾಡುವ ಸ್ಥಳದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ಅವರು ನಗರಸಭೆ ಕಚೇರಿಯ ಮುಂದುಗಡೆ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿ ಹಿಂದೆ ನಾವು ಮಾಡಿದ ಕಾರ್ಯಗಳನ್ನೇ ಮತ್ತೇ ಮತ್ತೇ ಭೂಮಿಪೂಜೆ ನೆರವೇರಿಸುವ ಶಾಸಕರು ಕ್ಷೇತ್ರದ ಮೂಲ ಅಭಿವೃದ್ಧಿಯನ್ನು ಮರೆತು ಕೇವಲ ಕಾನೂನುಬಾಹಿರ ಚಟುವಟಿಕೆಗಳಿಗೆ ಕುಮ್ಮಕ್ಕು ಕೊಡುತ್ತಿದ್ದಾರೆ ಎರಡೂ ತಾಲೂಕುಗಳಲ್ಲಿ ಬೇರೆಬೇರೆ ದಂಧೆಗಳು ಅವ್ಯಾಹತವಾಗಿ ನಡೆಯುತ್ತಿವೆ ಗಾಂಜಾ , ಹೆರಾಯಿನ್ ಸೇವಿಸುವವರ ಮತ್ತು ಇಳಕಲ್ ಐಪಿಎಲ್ ಮತ್ತು ಭಾರತದ ಐಪಿಎಲ್ ಗಳಲ್ಲಿ ಜೂಜಾಟ ಆಡಿ ಕಷ್ಟದಲ್ಲಿ ಸಿಲುಕುವ ಯುವಕರ ಸಂಖ್ಯೆ ಹೆಚ್ಚಾಗುವ ಹಾಗೆ ಇವರು ಮಾಡುತ್ತಿದ್ದಾರೆ ಎಂದು ಆಪಾದಿಸಿದರು.
ಜೂನಿಯರ್ ಕಾಲೇಜಿನಿಂದ ಕೆಇಬಿ, ಬನ್ನಿಕಟ್ಟಿ, ಸರಕಾರಿ ೧೦ ನೇ ನಂಬರ್ ಶಾಲೆ , ಮಹಾಂತೇಶ ಚಿತ್ರಮಂದಿರ, ಸುಭಾಷ್ ರಸ್ತೆ, ಸುವರ್ಣ ರಂಗಮಂದಿರ, ಅರಳಿಕಟ್ಟಿಯವರ ಮನೆ ಗಣೇಶ ಭವನ ಕಂಠಿ ಸರ್ಕಲ್ ಮಾರ್ಗವಾಗಿ ನಗರಸಭೆ ಕಚೇರಿಯ ಮುಂದೆ ಪ್ರತಿಭಟನಾಕಾರರು ಆಗಮಿಸಿದರು ಮಹಿಳೆಯರು ಖಾಲಿ ಕೊಡಗಳನ್ನು ಹೊತ್ತುಕೊಂಡು ಬಂದಿದ್ದರು ನಗರಸಭೆಯ ಎಲ್ಲಾ ಬಿಜೆಪಿ ಸದಸ್ಯರು , ಬಿಜೆಪಿ ನಗರ ಘಟಕ ಅಧ್ಯಕ್ಷ ಅರವಿಂದ ಮಂಗಳೂರ, ಗ್ರಾಮೀಣ ಘಟಕ ಅಧ್ಯಕ್ಷ ಮಹಾಂತಗೌಡ ಪಾಟೀಲ, ವೆಂಕಟೇಶ ಪೋತಾ, ಶ್ಯಾಮಸುಂದರ ಕರವಾ,ಮಂಜುನಾಥ ಹೊಸಮನಿ ಮತ್ತಿತರರು ಉಪಸ್ಥಿತರಿದ್ದರು ನಗರಸಭೆ ಹಿಂದಿನ ಅಧ್ಯಕ್ಷ ಲಕ್ಷ್ಮಣ ಗುರಂ ಮನವಿಪತ್ರವನ್ನು ನಗರಸಭೆ ವ್ಯವಸ್ಥಾಪಕ ಚನ್ನಬಸನಗೌಡ ಅವರಿಗೆ ಅರ್ಪಿಸಿದರು

Previous articleಚಿತ್ರರಂಗದ ಕರಾಟೆ ಲೆಜೆಂಡ್ಸ್ ಶಿಹಾನ್ ಹುಸೈನಿ ನಿಧನ
Next articleಆದೇಶದ ಹಿಂದಿನ ಕಾಣದ ಕೈಗಳು ಯಾವುವು?