ರಾಂಚಿ: ಹೇಮಂತ್ ಸೊರೇನ್ ನೇತೃತ್ವದ ಜೆಎಂಎಂ ಪಕ್ಷ ನಕ್ಸಲಿಸಮ್‌ಗೆ ಉತ್ತೇಜನ ಕೊಡುತ್ತಿದೆ ಎಂದು ಆರೋಪಿಸಿರುವ ಗೃಹ ಸಚಿವ ಅಮಿತ್ ಶಾ, ೨೦೨೬ರ ಮಾರ್ಚ್ ವೇಳೆ ದೇಶಾದ್ಯಂತ ನಕ್ಸಲಿಸಮ್‌ನ್ನು ನಿರ್ನಾಮ ಮಾಡಲಾಗುವುದು ಎಂದರು. ಜಾರ್ಖಂಡ್‌ನ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿ, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನಕ್ಸಲ್ ಬೆದರಿಕೆಗಳಿಂದ ದೇಶವನ್ನು ಮುಕ್ತ ಮಾಡಲಿದೆ. ಕ್ಷುಲ್ಲಕ ರಾಜಕೀಯ ಲಾಭಕ್ಕಾಗಿ ನಕ್ಸಲಿಸಮ್‌ಗೆ ಉತ್ತೇಜನ ನೀಡುತ್ತಿರುವ ದಲಿತ ವಿರೋಧಿ, ಬುಡಕಟ್ಟು ವಿರೋಧಿ, ಬಡವರ ಮತ್ತು ಯುವ ವಿರೋಧಿ ಹೇಮಂತ್ ಸರ್ಕಾರವನ್ನು ಜಾರ್ಖಂಡ್‌ನಿಂದ ಕಿತ್ತೊಗೆಯುವ ಸಮಯ ಬಂದಿದೆ ಎಂದರು.