೧೯ನೇ ಕ್ರಸ್ಟ್ ಗೇಟ್ ವೀಕ್ಷಿಸಿದ ಡಿಸಿಎಂ ಡಿಕೆ ಶಿವಕುಮಾರ

0
11

ಕೊಪ್ಪಳ: ತಾಲ್ಲೂಕಿನ ಮುನಿರಾಬಾದ್ ಬಳಿಯ ತುಂಗಭದ್ರಾ ಜಲಾಶಯದ ಕಿತ್ತುಹೋದ ೧೯ನೇ ಕ್ರಸ್ಟ್ ಗೇಟನ್ನು ಭಾನುವಾರ ಉಪಮುಖ್ಯಮಂತ್ರಿ ಮತ್ತು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ಭೇಟಿ ನೀಡಿ, ಪರಿಶೀಲಿಸಿದರು‌.

ಟಿ.ಬಿ.ಬೋರ್ಡಿನ ಎಂಜಿನಿಯರ್ ಗಳು ಮತ್ತು ಕಾಡಾ ಎಂಜಿನಿಯರ್ ಗಳು ಉಪಮುಖ್ಯಮಂತ್ರಿಗಳಿಗೆ ಗೇಟಿನ ಡಿಜೈನ್ ಮತ್ತು ಕಿತ್ತುಹೋಗಿರುವ ಬಗ್ಗೆ ಮಾಹಿತಿ ನೀಡಿದರು. ಅಲ್ಲದೇ ಸಣ್ಣ ನೀರಾವರಿ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಬೋಸರಾಜು, ಸಂಸದ ಇ.ತುಕಾರಾಂ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಕೂಡಾ ತುಂಗಭದ್ರಾ ಜಲಾಶಯದ ಹಿನ್ನಲೆ, ಘಟನೆ ಹಾಗೂ ಸಾಮರ್ಥ್ಯದ ಬಗ್ಗೆ ತಿಳಿಸಿದರು.

ಗೇಟ್ ತಯಾರಿಸಲು ನಾರಾಯಣ ಎಂಜಿನಿಯರಿಂಗ್ ಕಂಪನಿಗೆ ನೀಡಿದ್ದು, ೨ ದಿನಗಳಲ್ಲಿ ತಯಾರಿಸಿ ಕೊಡುವುದಾಗಿ ಭರವಸೆ ನೀಡಿದ್ದಾರೆ ಎಂದು ಡಿ.ಕೆ.ಶಿವಕುಮಾರಗೆ ಕೈಗೊಂಡ ಕ್ರಮಗಳ ಕುರಿತು ಸರ್ಮಪಕವಾಗಿ ಡಿ.ಬಿ.ಬೋರ್ಡಿನ ಎಂಜಿನಿಯರ್ ಗಳು ವಿವರಿಸಿದರು.

ಕಾಡಾ ಅಧ್ಯಕ್ಷ ಹಸನ್ ಸಾಬ್ ದೋಟಿಹಾಳ, ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ್, ಬಸನಗೌಡ ತುರ್ವಿಹಾಳ, ನಾರಾ ಭರತರೆಡ್ಡಿ, ಗವಿಯಪ್ಪ, ಮಾಜಿ ಸಚಿವರಾದ ಆನಂದಸಿಂಗ್, ಅಮರೇಗೌಡ ಬಯ್ಯಾಪುರ ಸೇರಿ ಹಲವರು ಇದ್ದರು.

Previous articleಕಾಡಾ ಅಧ್ಯಕ್ಷರನ್ನೇ ಒಳ ಬಿಡದ ಪೊಲೀಸರು
Next articleವಿನೇಶ್ ಫೋಗಟ್: ತೀರ್ಪು ಮತ್ತೆ ಮುಂದೂಡಿಕೆ