ಹುಬ್ಬಳ್ಳಿ: ಗಬ್ಬೂರ-ಕುಂದಗೋಳ ಕ್ರಾಸ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರನ್ನು ಬೆಂಡಿಗೇರಿ ಪೊಲೀಸ್ ಠಾಣೆ ಹಾಗೂ ಸಿಸಿಬಿ ಅಧಿಕಾರಿಗಳು ಬಂಧಿಸಿ ೧೨.೬೪ ಲಕ್ಷ ಮೊತ್ತದ ೧೦.೫ ಕೆ.ಜಿ ಗಾಂಜಾ, ಮೂರು ಮೊಬೈಲ್, ಕೃತ್ಯಕ್ಕೆ ಬಳಸಿದ ಒಂದು ಕಾರ್ ಮತ್ತು ಅಟೋ ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳು ಹಾವೇರಿಯ ಮಹಮ್ಮದ್ ಶಾಹಿದ್ ಎಲಿಗಾರ (೨೩), ರೆಹಮಾನ್ ಬೇಗ ಸವಣೂರ (೨೬), ನಿಸಾರ್ ಅಹ್ಮದ್ ನಾಯ್ಕನವರ (೪೪) ಎಂಬುವವರಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.