ರಾಹುಲ್ ಗಾಂಧಿ, ಒಂದು ವಾರದ ಮಟ್ಟಿಗೆ ಬ್ರಿಟನ್ ಪ್ರವಾಸದಲ್ಲಿದ್ದಾರೆ. ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ರಾಹುಲ್ ಗಾಂಧಿ ಉಪನ್ಯಾಸ ನೀಡಲಿದ್ದಾರೆ. ಉಪನ್ಯಾಸ ನೀಡಲು ತೆಳಿರುವ ರಾಹುಲ್, ತಮ್ಮ ಕೂದಲು ಹಾಗೂ ಗಡ್ಡಕ್ಕೆ ಕತ್ತರಿ ಪ್ರಯೋಗ ಮಾಡಿದ್ದಾರೆ. ಸದ್ಯ ರಾಹುಲ್ ಗಾಂಧಿಯ ಹೊಸ ಲುಕ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ರಾಹುಲ್ ಗಾಂಧಿ ಭಾರತೀಯ ವಲಸಿಗ ಸಮುದಾಯದೊಂದಿಗೆ ಸಂವಾದ ನಡೆಸಲಿದ್ದಾರೆ. ಕೇಂಬ್ರಿಡ್ಜ್ ಜಡ್ಜ್ ಬ್ಯುಸಿನೆಸ್ ಸ್ಕೂಲ್ ನಲ್ಲಿ ರಾಹುಲ್ ಗಾಂಧಿ ’21 ನೇ ಶತಮಾನದಲ್ಲಿ ಕೇಳುವುದು ಮತ್ತು ಕಲಿಯುವುದು’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ.
