ಚಿತ್ರದುರ್ಗ: ಬೊಮ್ಮಕ್ಕನಹಳ್ಳಿಯಲ್ಲಿ ದಂಪತಿಗಳ ಡಬಲ್ ಮರ್ಡರ್ ಮಾಡಿರುವ ಘಟನೆ ನಡೆದಿದೆ.
ಚಿತ್ರದುರ್ಗ ತಾಲ್ಲೂಕಿನ ಬೊಮ್ಮಕ್ಕನ ಹಳ್ಳಿ ಜಮೀನಲ್ಲಿ ನೀರು ಹಾಯಿಸುವಾಗ ಕೊಲೆ ಮಾಡಿದ್ದಾರೆ, ಗುರುವಾರ ಸಂಜೆ ಈರುಳ್ಳಿಗೆ ನೀರು ಕಟ್ಟಲು ಜಮೀನಿಗೆ ತೆರಳಿದ್ದ ದಂಪತಿಗಳಾದ ಹನುಮಂತಪ್ಪ (48) ತಿಪ್ಪಮ್ಮ (43) ಜಮೀನಲ್ಲೇ ಹತ್ಯೆಯಾದವರು.
ಸ್ಥಳಕ್ಕೆ ಚಿತ್ರದುರ್ಗ ಎಸ್ಪಿ ರಂಜಿತ್ ಬಂಡಾರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದು, ದಂಪತಿಗಳ ಬರ್ಬರ ಹತ್ಯೆಗೆ ನಿಖರ ಕಾರಣ ಇನ್ನೂ ಪತ್ತೆಯಾಗಿಲ್ಲ. ತುರುವನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.