ಹೇಳಿಕೆ ಕೊಡುವುದಕ್ಕಷ್ಟೇ ನಿಮ್ಮ ಪಾತ್ರ ಸೀಮಿತ

0
11

ಬೆಂಗಳೂರು: ತುರ್ತು ಚಿಕಿತ್ಸೆಗೆ ತೆರಳುತ್ತಿದ್ದ ಆಂಬ್ಯುಲೆನ್ಸ್‌ ಚೇಸ್‌ ಮಾಡಿ, ಅಡ್ಡಗಟ್ಟಿ ಆಂಬ್ಯುಲೆನ್ಸ್‌ ಅತಿ ವೇಗವಾಗಿ ಓಡಿಸ್ತಿದೀಯಾ ಎಂದು ಕೆಣಕಿ ಕಾರಿನಲ್ಲಿದ್ದ ನಾಲ್ವರಿಂದ ಆಂಬ್ಯುಲೆನ್ಸ್ ಚಾಲಕನ ಮೇಲೆ ಹಲ್ಲೆ ನಡೆದಿದೆ. ಆಂಬ್ಯುಲೆನ್ಸ್ ಚಾಲಕನ ಬಟ್ಟೆ ಹರಿದುಹಾಕಿ ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಉಸಿರಾಟದ ತೊಂದರೆ ಇರೋ ಮಗುವಿದೆ ಬಿಟ್ಬಿಡಿ ಎಂದು ಬೇಡಿಕೊಂಡರೂ ಕೇಳದೆ ಡ್ರೈವರ್‌ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಕುರಿತಂತೆ ಕರ್ನಾಟಕ ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ ಕಂಡ ಕಂಡಲ್ಲಿ ಪುಂಡರ ಅಟ್ಟಹಾಸ, ಸುಲಿಗೆಗಳಿಗೆ ಪ್ರಭಾವಿಗಳ ರಕ್ಷಾ ಕವಚ, ಎಗ್ಗಿಲ್ಲದೆ ನಡೆಯುತ್ತಿರುವ ಕೊಲೆಗಳು, ಇವೆಲ್ಲವೂ ಕರ್ನಾಟಕ ಕಾಂಗ್ರೆಸ್‌ ಆಡಳಿತದಲ್ಲಿ ಮಾಮೂಲಾಗಿದೆ.
ರಾಜ್ಯದ ರಸ್ತೆಗಳಲ್ಲಿ ಹಾಡಹಗಲಲ್ಲೇ ಕುಡಿದ ಮತ್ತಿನಲ್ಲಿ ವಾಹನ ಓಡಿಸಿದರೂ ಪೊಲೀಸರು ಅಡ್ಡಗಟ್ಟುವುದಿಲ್ಲ! ಆಂಬ್ಯುಲೆನ್ಸ್‌ನ್ನೇ ತಡೆಗಟ್ಟಿ ಡ್ರೈವರ್‌ಗೆ ಥಳಿಸಿ ಪುಂಡರು ಅಟ್ಟಹಾಸ ಮೆರೆಯುತ್ತಿರುವುದು ಅರಾಜಕತೆ ಹೇಗೆ ತಾಂಡವವಾಡುತ್ತಿದೆ ಎಂಬುದನ್ನು ತೋರಿಸುತ್ತಿದೆ.
ಗೃಹ ಸಚಿವ ಡಾ. ಪರಮೇಶ್ವರ ಅವರೇ, ತಾವು ರಾಜ್ಯದ ಗೃಹ ಸಚಿವರು ಎಂಬ ನೆನಪಾದರೂ ತಮಗಿದೆಯೇ? ಇದುವರೆಗೆ ಹೇಳಿಕೆ ಕೊಡುವುದಕ್ಕಷ್ಟೇ ನಿಮ್ಮ ಪಾತ್ರ ಸೀಮಿತವಾಗಿತ್ತು. ಈಗೀಗ ಅದೂ ನಿಂತಂತಿದೆ ಎಂದಿದ್ದಾರೆ.

Previous articleಸತತ 23ನೇ ಬಾರಿ ಉದ್ಯಮಿ ಗುಪ್ತಾಗೆ ರಫ್ತುದಾರ ಪ್ರಶಸ್ತಿ
Next articleಸಿಎಂ ಬೆಂಗಾವಲು ವಾಹನದ ಮೇಲೆ ಶಂಕಿತ ಉಗ್ರರ ದಾಳಿ