ಹೆಸ್ಕಾಂ ಗ್ರಾಹಕರಿಗಾಗಿ ವಾಟ್ಸಾಪ್ ಸಹಾಯವಾಣಿ

0
26

9480883899 ಸಂಖ್ಯೆಗೆ ಫೋಟೋ, ವಿಡಿಯೋ ಜತೆ ದೂರು ನೀಡಬಹುದು

ಹುಬ್ಬಳ್ಳಿ: ಜಿಲ್ಲೆಯಲ್ಲಿ ಸುರಿಯುತ್ತಿರುವ ನಿರಂತರ ಮಳೆ ಹಿನ್ನೆಲೆಯಲ್ಲಿ ವಿದ್ಯುತ್ ಸಂಬಂಧಿತ ಸಮಸ್ಯೆಗಳ ಬಗ್ಗೆ ದೂರು ನೀಡಲು ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ (ಹೆಸ್ಕಾಂ) ವಾಟ್ಸಾಪ್ ಸಹಾಯವಾಣಿ ಲಭ್ಯವಿರುತ್ತದೆ.

ವಿದ್ಯುತ್ ವ್ಯತ್ಯಯ, ವಿದ್ಯುತ್ ಕಂಬಗಳು ಧರೆಗುರುಳುವುದು, ತಂತಿ ತುಂಡಾಗುವುದು, ಟ್ರಾನ್ಸ್ ಫಾರ್ಮರ್ ವೈಫಲ್ಯ ಸಂಬಂಧಿತ ದೂರುಗಳು ಸೇರಿದಂತೆ ವಿದ್ಯುತ್ ಸಂಬಂಧಿತ ಸಮಸ್ಯೆಗಳು ಕಂಡುಬಂದಲ್ಲಿ ಗ್ರಾಹಕರು ಹೆಸ್ಕಾಂ ಸಹಾಯವಾಣಿ 1912 ಜತೆಗೆ ವಾಟ್ಸಾಪ್ ಗ್ರಾಹಕ ಸೇವಾ ಸಂಖ್ಯೆ (9480883899) ಗೂ ಸಹ ಸಂದೇಶ ಹಾಗೂ ಛಾಯಾ ಚಿತ್ರದ ಮೂಲಕ ದೂರು ಸಲ್ಲಿಸಬಹುದಾಗಿದೆ. ವಾಟ್ಸಾಪ್ ಮೂಲಕ ಗ್ರಾಹಕರು ತಾವು ಅನುಭವಿಸುತ್ತಿರುವ ವಿದ್ಯುತ್ ಸಮಸ್ಯೆ/ದೂರು-ದುಮ್ಮಾನಗಳ ಬಗ್ಗೆ ಫೋಟೋ, ವಿಡಿಯೋ ಸಹಿತ ಗಮನಕ್ಕೆ ತರಬಹುದು.

ಹೆಸ್ಕಾಂ ತನ್ನ ಗ್ರಾಹಕರ ಅನುಕೂಲಕ್ಕಾಗಿ ಈಗಾಗಲೇ 24*7 ಕೇಂದ್ರಿಕೃತ ಗ್ರಾಹಕ ಸೇವಾ ಕೇಂದ್ರವನ್ನು ನಿಗಮದ ಕೇಂದ್ರ ಕಚೇರಿಯಲ್ಲಿ ಸ್ಥಾಪಿಸಿದೆ. ಇದು ಗ್ರಾಹಕರ ದೂರುಗಳ ನೋಂದಣಿ ಮತ್ತು ತ್ವರಿತ ಪರಿಹಾರದಂತಹ ಕಾರ್ಯಗಳಿಗಾಗಿ ಮತ್ತು ಸರಿಯಾದ ಮೇಲ್ವಿಚಾರಣೆಗಾಗಿ ಕಾರ್ಯನಿರ್ವಹಿಸುತ್ತದೆ. ಹೆಸ್ಕಾಂ ವ್ಯಾಪ್ತಿಗೆ ಬರುವ ವಿದ್ಯುತ್ ಗ್ರಾಹಕರು ತಮ್ಮ ವಿದ್ಯುತ್ ಸಂಬಂಧಿತ ದೂರು-ದುಮ್ಮಾನಗಳನ್ನು ಸಹಾಯವಾಣಿ 1912 ಗೆ (ಉಚಿತ) ಕರೆ ಮಾಡಬಹುದು. ತಮ್ಮಲ್ಲಿ ದಾಖಲಾದ ದೂರುಗಳಿಗೆ ಹೆಸ್ಕಾಂ ತಕ್ಷಣವೇ ಸ್ಪಂದಿಸಲಿದ್ದು, ಗ್ರಾಹಕರ ಸಮಸ್ಯೆ ಬಗೆಹರಿಸಲಿದೆ.

ಇದಲ್ಲದೆ, ಗ್ರಾಹಕರು ಇ- ಮೇಲ್ (customercare@hescom.co.in), ಫೇಸ್ ಬುಕ್ ಖಾತೆ ( https://www.facebook.com/hescomhbl), ಹಾಗೂ ಎಕ್ಸ್ (ಟ್ವಿಟರ್) ಖಾತೆ (https://twitter.com/HubliHescom) ಮೂಲಕವೂ ದೂರುಗಳನ್ನು ಸಲ್ಲಿಸಬಹುದು. ಇದರ ಜತೆಗೆ ಟ್ರಾನ್ಸ್ ಫಾರ್ಮರ್ ವೈಫಲ್ಯ ಸಂಬಂಧಿತ ದೂರುಗಳಿದ್ದಲ್ಲಿ ಟೋಲ್ ಫ್ರೀ ಸಂಖ್ಯೆ 1800-425-4754 ಗೆ ನೀಡಬಹುದು ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.

Previous articleಮೆಸ್ಸಿ ಪಡೆಗೆ ಮತ್ತೊಂದು ಕಿರೀಟ
Next articleಜನವಿರೋಧಿ ನೀತಿ ಖಂಡಿಸಿ ಬಿಜೆಪಿಯ ಪ್ರತಿಭಟನಾ ಮೆರವಣಿಗೆ