ಹೆದ್ದಾರಿಯಲ್ಲಿ ಕೃತಕ ನೆರೆ ಭೀತಿ

0
18


ಮೂಡುಬಿದಿರೆ: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಮೂಡುಬಿದಿರೆ-ಕಾರ್ಕಳ ಹೆದ್ದಾರಿಯ ಅಲಂಗಾರಿನಲ್ಲಿ ರಸ್ತೆಯಲ್ಲಿ ನೀರು ನಿಂತಿದ್ದು, ಕೃತಕ ನೆರೆಯ ಭೀತಿ ಉಂಟಾಗಿದೆ. ದ್ವಿಚಕ್ರವಾಹನ ಮಾತ್ರವಲ್ಲದೆ ಕಾರು ಹಾಗೂ ಘನ ವಾಹನಗಳ ಸಂಚಾರಕ್ಕೂ ತೊಡಕು ಉಂಟಾಗುತ್ತಿದೆ. ರಸ್ತೆ, ಚರಂಡಿ ಹಾಗೂ ರಸ್ತೆ ಬದಿಯ ಇಕ್ಕೆಲದಲ್ಲಿ ಹಳ್ಳದಂತೆ ನೀರು ತುಂಬಿದ್ದು, ವಾಹನ ಸವಾರರು, ಪಾದಾಚರಿಗಳು ಪರದಾಡುವಂತಹ ಸ್ಥಿತಿ ಇದೆ ಎಂದು ಸ್ಥಳೀಯರಾದ ದಯಾನಂದ ಪೈ ತಿಳಿಸಿದ್ದಾರೆ.

Previous articleಅಬ್ದುಲ್ ರೆಹ್ಮಾನ್ ಕೊಲೆ: ಕಾಂಗ್ರೆಸ್‌ಗೆ ಅಲ್ಪಸಂಖ್ಯಾತ ನಾಯಕರು, ಕಾರ್ಯಕರ್ತರು ರಾಜೀನಾಮೆ
Next articleಗ್ಯಾರಂಟಿ ನಿಲ್ಲಿಸುವುದಕ್ಕೆ ಕಳ್ಳಮಾರ್ಗ ಹುಡುಕಬೇಡಿ