ಹೆಣ ನೋಡಲು ಯಾರೂ ಬರಲಿಲ್ಲ…

0
36

ಹುಬ್ಬಳ್ಳಿ: ಬಾಲಕಿ ಅಪಹರಣ ಮಾಡಿ ಕೊಲೆಗೈದು ಪೊಲೀಸರ ಗುಂಡೇಟಿಗೆ ಬಲಿಯಾದ ಆರೋಪಿ ರಿತೇಶ ಮೃತದೇಹ ಕಿಮ್ಸ್‌ ಆಸ್ಪತ್ರೆಯಲ್ಲಿ ಅನಾಥವಾಗಿ ಬಿದ್ದಿದೆ.
ಬಿಹಾರದ ವಿಳಾಸ ಇಲ್ಲದ ಕಾರಣ ಮತ್ತು ಈತನ ಸಾವಿನ ಸುದ್ದಿ ಮನೆಯವರಿಗೆ ಗೊತ್ತಾಗದ ಕಾರಣಕ್ಕಾಗಿ ರಿತೇಶನ ಹೆಣ ಕಿಮ್ಸ್ ಆಸ್ಪತ್ರೆಯ ಶವಾಗಾರದಲ್ಲಿ ಅನಾಥವಾಗಿದೆ. ಈ ಸಂಬಂಧ ಆತನ ಮನೆಯವರನ್ನು ಪತ್ತೆ ಹಚ್ಚಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಈತನ ಚಿತ್ರ ಮತ್ತು ಕೃತ್ಯದ ಬಗ್ಗೆ ಬಿಹಾರ ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಗಳಿಗೂ ಮಾಹಿತಿ ರವಾನೆ ಮಾಡಲಾಗಿದೆ. ಅಲ್ಲಿಂದ ಏನಾದರೂ ಸುದ್ದಿ ಬರಬಹುದು ಎಂದು ಹುಬ್ಬಳ್ಳಿ ಪೊಲೀಸರು ಕಾದು ಕುಳಿತಿದ್ದಾರೆ.
ಏತನ್ಮಧ್ಯೆ ಸೋಮವಾರ ಜಿಲ್ಲಾ ನ್ಯಾಯಾಧೀಶರ ಸಮ್ಮುಖದಲ್ಲಿ ರಿತೇಶನ ಮೃತದೇದಹದ ಮರಣೋತ್ತರ ಪರೀಕ್ಷೆ ನಡೆದಿದೆ. ಪೊಲೀಸರ ಸುಪರ್ದಿಯಲ್ಲಿರುವ ಮೃತದೇಹವನ್ನು ಇನ್ನೆರಡು ದಿನ ಕಾಯ್ದು ಪಾಲಿಕೆಗೆ ಹಸ್ತಾಂತರಿಸಲಾಗುವುದು. ಮೃತನ ಸಂಬಂಧಿಕರು ಬಾರದಿದ್ದಲ್ಲಿ ಪಾಲಿಕೆಯವರೇ ಅಂತ್ಯಸಂಸ್ಕಾರ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Previous articleರಾಜ್ಯದಲ್ಲೇ ಪ್ರಥಮ ಸಂವಿಧಾನ ಪೀಠಿಕೆ ಲೋಹದ ಪ್ರತಿ
Next articleಶಿವಮೊಗ್ಗ ಲಾಡ್ಜ್‌ನಲ್ಲಿ ಹುಬ್ಬಳ್ಳಿ ಮೂಲದ ವ್ಯಕ್ತಿಯ ಮೃತದೇಹ ಪತ್ತೆ