ಚಿತ್ರದುರ್ಗ: ಹೃದಯಾಘಾತದಿಂದ ಪತಿ ಪತ್ನಿ ಇಬ್ಬರು ಸಾವನ್ನಪ್ಪಿರುವ ಘಟನೆ ಇಂದು ನಗರದ ಕೆಳಗೋಟೆ ಬಡಾವಣೆಯಲ್ಲಿ ಸಂಭವಿಸಿದ್ದು, ಸಾವಿನಲ್ಲೂ ಕೂಡ ದಂಪತಿಗಳು ಒಂದಾಗಿದ್ದಾರೆ.
ನಿವೃತ್ತ ಲೈಬ್ರರಿಯನ್ ಆಗಿದ್ದ ಓಂಕಾರಮೂರ್ತಿ ಅವರಿಗೆ ಇಂದು ಬೆಳಗ್ಗೆ ಹೃದಯಾಘಾತವಾಗಿದ್ದು, ಕೂಡಲೇ ಅವರನ್ನು ಬಸವೇಶ್ವರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಪತಿಯ ಹೃದಯಾಘಾತದ ವಿಷಯ ತಿಳಿದು, ಮನೆಯಲ್ಲಿದ್ದ ಪತ್ನಿ ದ್ರಾಕ್ಷಾಯಣಿ ಅವರಿಗೂ ಕೂಡ ಹೃದಯಾಘಾತ ಅಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇತ್ತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಓಂಕಾರಮೂರ್ತಿ ಅವರಿಗೆ ನೀಡಲಾಗುತ್ತಿದ್ದ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾರೆ. ಎಸ್ ಜೆ ಎಂ ವಿದ್ಯಾಪೀಠದಲ್ಲಿ ಮುಖ್ಯ ಗ್ರಂಥಪಾಲಕರಾಗಿ 30 ವರ್ಷ ಕೆಲಸ ಮಾಡಿದ್ದರು. ಬಹಳ ಸೌಮ್ಯ ಸ್ವಭಾವದಿಂದಲೇ ಇಬ್ಬರೂ ಜೀವನ ಮಾಡುತ್ತಿದ್ದರು.