Home ತಾಜಾ ಸುದ್ದಿ ಹೃದಯಾಘಾತ ವ್ಯಾಕ್ಸಿನ್ ನಿಂದಲ್ಲ

ಹೃದಯಾಘಾತ ವ್ಯಾಕ್ಸಿನ್ ನಿಂದಲ್ಲ

0
120

ಹುಬ್ಬಳ್ಳಿ: ಇತ್ತೀಚೆಗೆ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವ ಪ್ರಕರಣಗಳು ನಿಜಕ್ಕೂ ಬೇಸರದ ಸಂಗತಿ. ಇದು ಕೋವಿಡ್ ಲಸಿಕೆಯಿಂದ ಆಗುತ್ತಿದೆ ಎನ್ನುತ್ತಿರುವುದು ಬೇಜಾವಾಬ್ದಾರಿತನದ ಪರಮಾವಧಿ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

ವಿಶ್ವದ 150ಕ್ಕೂ ಹೆಚ್ಚು ದೇಶಗಳಿಗೆ ಕೋವಿಡ್ ಲಸಿಕೆ ಹೋಗಿದೆ. ಇಡೀ‌ ವಿಶ್ವವೇ ಭಾರತವನ್ನ ಕೊಂಡಾಡಿದೆ. ಆದರೆ, ಈಗ ಈ ರೀತಿ ಹೇಳಿಕೆ ನೀಡುತ್ತಿರುವುದು ದೇಶಕ್ಕೆ ಮಾಡುವ ಅಪಮಾನ ಎಂದರು.

ಯುದ್ಧದ ಸಮಯದಲ್ಲೂ ಪಾಕಿಸ್ತಾನದ ಪರವಾದ ಹೇಳಿಕೆಯನ್ನ ಕಾಂಗ್ರೆಸ್ ನವರು ನೀಡಿದ್ದರು. ಚೀನಾ ವಿಚಾರವಾಗಿಯೂ ಬೇಜಾವಾಬ್ದಾರಿತನದ ಹೇಳಿಕೆ ನೀಡುತ್ತಾರೆ ಎಂದು ಕಿಡಿ ಕಾರಿದರು‌.