ಹುಬ್ಬಳ್ಳಿ ಸೇರಿದಂತೆ ದೇಶಾದ್ಯಂತ ಮುಸ್ಲಿಂ ಬಾಂಧವರಿಂದ ರಂಜಾನ್ ಹಬ್ಬ ಆಚರಣೆ

ಹುಬ್ಬಳ್ಳಿ: ಇಂದು ದೇಶಾದ್ಯಂತ ಮುಸಲ್ಮಾನರ ಪವಿತ್ರ ಹಬ್ಬ ಈದ್ ಉಲ್ ಫಿತರ್(ರಂಜಾನ್) ಆಚರಿಸಲಾಗುತ್ತಿದೆ.
ಹುಬ್ಬಳ್ಳಿ ಸೇರಿದಂತೆ ರಾಜ್ಯಾದ್ಯಂತ ಮುಸ್ಲಿಂ ಬಾಂಧವರು ಬೆಳಗ್ಗೆಯೇ ಮಸೀದಿಗಳಿಗೆ ತೆರಳಿ ಸಾಮೂಹಿಕ ಪ್ರಾರ್ಥನೆಯಲ್ಲಿ ತೊಡಗಿರುವುದು ಕಂಡುಬಂತು. ಚನ್ನಮ್ಮ ಮೈದಾನದಲ್ಲಿ (ಈದ್ಗಾ) ರಂಜಾನ್ ಹಬ್ಬದ ಪ್ರಯುಕ್ತ ಮುಸ್ಲಿಂ ಭಾಂದವರಿಂದ ಪ್ರಾರ್ಥನೆ ಸಲ್ಲಿಸಿದರು.
ಮುಸ್ಮಿಂ ಬಾಂಧವರು ಪರಸ್ಪರ ಶುಭಹಾರೈಸಿದರು. ರಂಜಾನ್ ಹಬ್ಬ ಆಚರಣೆ ಮಾಡುವ ಮೂಲಕ 30 ದಿನಗಳ ಉಪವಾಸ ಅಂತ್ಯವಾಗಿದೆ.