ಹುಬ್ಬಳ್ಳಿ: ಮಳೆನೀರಿನಲ್ಲಿ ಕೊಚ್ಚಿ ಹೋದ ಮೃತನ ಮನೆಗೆ ಲಾಡ್‌ ಭೇಟಿ

ಹುಬ್ಬಳ್ಳಿ: ಇತ್ತೀಚೆಗೆ ಸುರಿದ ಮಳೆಗೆ ಹಳ್ಳದಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿದ್ದ ಹಳೆಹುಬ್ಬಳ್ಳಿ ನಿವಾಸಿ ಹುಸೇನಸಾಬ ಕಳಸ ಅವರ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಭೇಟಿ ನೀಡಿ‌ ಕುಟುಂಬದವರಿಗೆ ಸಾಂತ್ವನ ಹೇಳಿದರು. ಇದೇ ವೇಳೆ ಸರಕಾರದ ಪರಿಹಾರದ ಐದು ಲಕ್ಷ ಪರಿಹಾರ ಧನದ ಆದೇಶ ಪ್ರತಿ ನೀಡಿದರು.