ಹುಬ್ಬಳ್ಳಿ ಮತ್ತು ಬೆಂಗಳೂರು ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲುಗಳ ಅವಧಿ ವಿಸ್ತರಣೆ

0
32

ಹುಬ್ಬಳ್ಳಿ : ಇಲ್ಲಿನ ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲ್ವೆ ನಿಲ್ದಾಣ ಹಾಗೂ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣಗಳ ನಡುವೆ ಪ್ರತಿದಿನ ಸಂಚರಿಸುವ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ವಿಶೇಷ (ರೈಲು ಸಂಖ್ಯೆ 07339/07340) ರೈಲುಗಳ ಅವಧಿಯನ್ನು ಈಗಿರುವ ನಿಲುಗಡೆ ಮತ್ತು ಸಮಯದೊಂದಿಗೆ ವಿಸ್ತರಿಸಲು ನೈಋತ್ಯ ರೈಲ್ವೆ ನಿರ್ಧರಿಸಿದೆ.
ವಿವರಗಳು ಈ ಕೆಳಗಿನಂತಿವೆ:
ಹುಬ್ಬಳ್ಳಿಯ ಎಸ್ಎಸ್ಎಸ್ ಹುಬ್ಬಳ್ಳಿ- ಬೆಂಗಳೂರಿನ ಕೆಎಸ್ಆರ್ ರೈಲ್ವೆ (ರೈಲು ಸಂಖ್ಯೆ – 07339 )
ಪ್ರತಿ ದಿನ (ಡೈಲಿ) ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ವಿಶೇಷ ರೈಲು ಸೇವೆ ಈ ಮೊದಲು ಡಿಸೆಂಬರ್ 31, 2024 ರವರೆಗೆ ಓಡಿಸಲು ನಿಗದಿಪಡಿಸಲಾಗಿತ್ತು. ಈಗ ಜನವರಿ 1, 2025 ರಿಂದ ಜೂನ್ 30, 2025 ರವರೆಗೆ ವಿಸ್ತರಿಸಲಾಗಿದೆ.

ಬೆಂಗಳೂರಿನ ಕೆಎಸ್ಆರ್ ರೈಲ್ವೆ ನಿಲ್ದಾಣ – ಹುಬ್ಬಳ್ಳಿ ಎಸ್ಎಸ್ಎಸ್ ರೈಲ್ವೆ ನಿಲ್ದಾಣಗಳ ನಡುವೆ ಡೈಲಿ ಸೂಪರ್ ಫಾಸ್ಟ್ ಎಕ್ಸಪ್ರೆಸ್ ( ರೈಲು ಸಂಖ್ಯೆ – 07340 ) ವಿಶೇಷ ರೈಲು ಸೇವೆ ಈ ಮೊದಲು ಜನವರಿ 1, 2025 ರವರೆಗೆ ಸಂಚರಿಸಲು ನಿಗದಿಪಡಿಸಲಾಗಿತ್ತು, ಈಗ ಜನವರಿ 2, 2025 ರಿಂದ ಜುಲೈ 1, 2025 ರವರೆಗೆ ವಿಸ್ತರಿಸಲಾಗಿದೆ ಎಂದು ನೈಋತ್ಯ ರೈಲ್ವೆ ವಲಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ.ಮಂಜುನಾಥ ಕನಮಡಿ ತಿಳಿಸಿದ್ದಾರೆ.

Previous articleಪುಡಿ ರಾಜಕಾರಣಿಗಳಂತೆ ಮೋದಿ ಮಾತನಾಡಬಾರದು
Next articleದೇಣಿಗೆ ಕೊಟ್ಟು ಅನುಭವ ಮಂಟಪವನ್ನೇ ಅತಿಕ್ರಮಿಸಿದ್ದಾರೆ…