ಹುಬ್ಬಳ್ಳಿ-ಬೆಂಗಳೂರು ಮತ್ತೊಂದು ವಿಮಾನ

0
37

ನವದೆಹಲಿ: ರಾಜ್ಯದ ರಾಜಧಾನಿಯೊಂದಿಗೆ ವಾಣಿಜ್ಯ ನಗರಿ ಹುಬ್ಬಳ್ಳಿಯಿಂದ ಈಗ ಮತ್ತೊಂದು ವಿಮಾನಯಾನ ಶೀಘ್ರದಲ್ಲಿಯೇ(ಮಾರ್ಚ್‌ 30ರಿಂದ) ಆರಂಭವಾಗಲಿದೆ. ಇದರೊಂದಿಗೆ ದಿನಕ್ಕೆ ಮೂರು ವಿಮಾನಗಳು ಬೆಂಗಳೂರು ಮತ್ತು ಹುಬ್ಬಳ್ಳಿ ಮಧ್ಯ ಸಂಚಾರ ಮಾಡಲಿವೆ.
ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ಇಂಡಿಗೋ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ಈ ಸೇವೆ ಆರಂಭಿಸುವ ಕುರಿತು ಚರ್ಚಿಸಿದ್ದರ ಫಲವಾಗಿ ಈ ನಿರ್ಣಯ ಕೈಗೊಳ್ಳಲಾಗಿದೆ.
ಬೆಂಗಳೂರು-ಹುಬ್ಬಳ್ಳಿ ೬ಇ ೭೦೫೬ ಬೆಳಗ್ಗೆ ೯.೫೫-೧೧.೨೦ ಕ್ಕೆ ಹಾಗೂ ಹುಬ್ಬಳ್ಳಿ-ಬೆಂಗಳೂರು ೬ಇ ೭೨೬೩ ಬೆಳಗ್ಗೆ ೧೧.೫೫-ಮಧ್ಯಾಹ್ನ ೧.೨೦ ಕ್ಕೆ ತಲುಪಲಿದೆ.
ಹುಬ್ಬಳ್ಳಿ-ಬೆಂಗಳೂರ ನಡುವೆ ಮತ್ತೊಂದು ವಿಮಾನ ಸೇವೆಗೆ ಅವಕಾಶ ಕಲ್ಪಿಸಿದ್ದಕ್ಕಾಗಿ ಸಚಿವ ಜೋಶಿಯವರು ಇಂಡಿಗೋ ಆಡಳಿತ ವರ್ಗಕ್ಕೆ ಧನ್ಯವಾದಗಳನ್ನು ಹೇಳಿದ್ದಾರೆ. ಈ ಸೇವೆಯಿಂದ ಹುಬ್ಬಳ್ಳಿ-ಧಾರವಾಡ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಿಂದ ಬೆಂಗಳೂರಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ಸಚಿವರು ಹೇಳಿದ್ದಾರೆ.
ಇದೇ ಸಮಯದಲ್ಲಿಯೇ ಹುಬ್ಬಳ್ಳಿ ಮತ್ತು ಅಹ್ಮದಾಬಾದ ನಡುವೆ ವಿಮಾನಯಾನ ಆರಂಭಿಸಲೂ ಜೋಶಿಯವರು ಇಂಡಿಗೋ ಅಧಿಕಾರಿಗಳಲ್ಲಿ ವಿನಂತಿಸಿದ್ದಾರೆ.

Previous articleಹುಬ್ಬಳ್ಳಿ ಜನತೆಗೆ ಸಿಹಿ ಸುದ್ದಿ
Next articleಲೋಕಸಭಾ ಕ್ಷೇತ್ರ ಮರುವಿಂಗಡನೆ ವಿಚಾರ: ಎಲ್ಲ ರಾಜಕೀಯ ಪಕ್ಷಗಳು ಒಗ್ಗೂಡಿ ಚರ್ಚಿಸಬೇಕು