ಧಾರವಾಡ: ಆಂಧ್ರ ಪ್ರದೇಶದಿಂದ ಬಂದ ನನಗೆ ಕಳೆದ ೩೦ ವರ್ಷಗಳಿಂದ ಸೇವೆ ಮಾಡಲು ಅವಕಾಶ ನೀಡಿದ ಹುಬ್ಬಳ್ಳಿ-ಧಾರವಾಡದ ಜನರಿಗೆ ನನಗೆ ಪ್ರದಾನ ಮಾಡಿದ ಗೌರವ ಡಾಕ್ಟರೇಟ್ ಸಮರ್ಪಿಸಲು ಬಯಸುತ್ತೇನೆ ಎಂದು ಸ್ವರ್ಣಾ ಸಮೂಹ ಸಂಸ್ಥೆಯ ಮುಖ್ಯಸ್ಥ ಡಾ. ವಿಎಸ್‌ವಿ ಪ್ರಸಾದ ಹೇಳಿದರು.
ಕರ್ನಾಟಕ ವಿಶ್ವವಿದ್ಯಾಲಯ ೭೪ನೇ ಘಟಿಕೋತ್ಸವದಲ್ಲಿ ಕೊಡಮಾಡಿದ ಗೌರವ ಡಾಕ್ಟರೇಟ್ ಸ್ವೀಕರಿಸಿದ ನಂತರ ಸಂಯುಕ್ತ ಕರ್ನಾಟಕದೊಂದಿಗೆ ಮಾತನಾಡಿ, ಅವಳಿ ನಗರದ ಜನರು ನನ್ನನ್ನು ಬೆಳೆಸಿದ್ದಾರೆ. ಆಂಧ್ರ ಪ್ರದೇಶದ ವಿಜಯವಾಡದ ನನಗೆ ಅವಳಿ ನಗರದ ಜನರು ಗೌರವಾದರ ನೀಡಿದ್ದಾರೆ. ನನ್ನ ಕೈಲಾದ ಸೇವೆ ಮಾಡಲು ಸಹಕಾರ ನೀಡಿದ್ದಾರೆ. ಕೋವಿಡ್ ಸಂದರ್ಭದಲ್ಲಿ ನಾನು ಮಾಡಿದ ಅಲ್ಪ ಸೇವೆಯನ್ನು ಪರಿಗಣಿಸಿ ಕರ್ನಾಟಕ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿರಬಹುದು. ಗೌರವ ಡಾಕ್ಟರೇಟ್‌ಗೆ ನನ್ನನ್ನು ಆಯ್ಕೆ ಮಾಡಿದ ರಾಜ್ಯಪಾಲರು, ಕುಲಪತಿಗಳು, ಸೆನೆಟ್, ಸಿಂಡಿಕೇಟ್ ಸದಸ್ಯರು ಹಾಗೂ ಎಲ್ಲ ಹಿತೈಷಿಗಳಿಗೆ ಧನ್ಯವಾದ ತಿಳಿಸುತ್ತೇನೆ ಎಂದರು.