ಹುಬ್ಬಳ್ಳಿ: ಅಪಘಾತದಲ್ಲಿ ಲಾರಿ ಕ್ಲೀನರ್ ಎದೆ ಸೀಳಿದ್ದ ೯೮ ಸೆಮೀ ಕಬ್ಬಿಣದ ರಾಡ್‌ನ್ನು ಕೆಎಂಸಿಆರ್‌ಐ ವೈದ್ಯರು ಶಸ್ತ್ರ ಚಿಕಿತ್ಸೆ ಮೂಲಕ ಹೊರೆ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್
ಹುಬ್ಬಳ್ಳಿಯ ಕೆಎಂಸಿಆರ್‌ಐ ವೈದ್ಯರಿಗೆ ಅಭಿನಂದನೆ ತಿಳಿಸಿದ್ದಾರೆ. ಭೀಕರ ಅಪಘಾತದಲ್ಲಿ ಲಾರಿ ಕ್ಲೀನರ್ ಎದೆಗೆ ಚುಚ್ಚಿದ್ದ 98 ಸೆಂ. ಮೀ ಉದ್ದದ ಕಬ್ಬಿಣ ಪೈಪ್ ಅನ್ನು ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದಿರುವ ಹುಬ್ಬಳ್ಳಿಯ ಕೆಎಂಸಿಆರ್‌ಐ ವೈದ್ಯರಿಗೆ ಅಭಿನಂದನೆಗಳು.
ರಾಣಿಬೆನ್ನೂರಿನ ಹೂಲಿಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಅಪಘಾತದಲ್ಲಿ ಲಾರಿ ಕ್ಲೀನರ್ ದಯಾನಂದ ಶಂಕರ ಬಡಗಿ ಅವರಿಗೆ ಹೃದಯದ ಸಮೀಪವೇ ಕಬ್ಬಿಣದ ಪೈಪ್ ಚುಚ್ಚಿತ್ತು. ಕಠಿಣ ಪರಿಸ್ಥಿತಿಯಲ್ಲಿಯು ಡಾ. ರಮೇಶ ಹೊಸಮನಿ ನೇತೃತ್ವದ ತಂಡ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿ ಪೈಪ್ ಹೊರ ತೆಗೆದು, ರೋಗಿಯ ಪ್ರಾಣ ಉಳಿಸಿದೆ ಎಂದಿದ್ದಾರೆ.