ಹುಬ್ಬಳ್ಳಿಯಲ್ಲೂ ಬ್ಯಾಂಕ್ ದರೋಡೆಗೆ ಯತ್ನ

0
16

ಕೆನರಾ ಬ್ಯಾಂಕ್ ಶಟರ್ಸ್ನ ಕೊಂಡಿ ಕತ್ತರಿಸಿ ಕೀಲಿ ಮುರಿಯಲೆತ್ನಿಸಿದ ದರೋಡೆಕೋರರು

ಹುಬ್ಬಳ್ಳಿ: ಬೀದರ್‌ನಲ್ಲಿ ಎಟಿಎಂ ಹಣ ತುಂಬಿಸಲು ಹೋದವರ ಮೇಲೆ ಫೈರಿಂಗ್ ಮಾಡಿ ಹಣ ಕಳ್ಳತನ, ಮಂಗಳೂರಿನಲ್ಲಿ ಬ್ಯಾಂಕಿನಲ್ಲಿ ಕಳ್ಳತನ ನಡೆದ ಬೆನ್ನಲ್ಲಿಯೇ ಹುಬ್ಬಳ್ಳಿಯಲ್ಲೂ ರಾಷ್ಟ್ರೀಕೃತ ಬ್ಯಾಂಕ್ ದರೋಡೆಗೆ ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ.
ನವನಗರದ ಎಪಿಎಂಸಿಯಲ್ಲಿರುವ ಕೆನರಾ ಬ್ಯಾಂಕ್ ಕಳ್ಳತನಕ್ಕೆ ವಿಫಲ ಯತ್ನ ನಡೆಸಿರುವ ದುಷ್ಕರ್ಮಿಗಳ ಕೃತ್ಯ ಬಯಲಿಗೆ ಬಂದಿದೆ. ಶಟರ್ಸ್ಗೆ ಹಾಕಿದ್ದ ಕಬ್ಬಿಣದ ಕೊಂಡಿ, ಕೀಲಿ ಮುರಿಯಲು ದುಷ್ಕರ್ಮಿಗಳು ಪಯತ್ನಿಸಿದ್ದಾರೆ. ಕೃತ್ಯದಲ್ಲಿ ಕೊಂಡಿಯೊಂದು ಕಟ್ ಆಗಿದ್ದು ಕೃತ್ಯವನ್ನು ತೆರೆದಿಟ್ಟಿದೆ. ಕಳೆದ ರಾತ್ರಿ ವೇಳೆಯಲ್ಲಿ ಈ ಘಟನೆ ನಡೆದಿರಬಹುದು ಎಂದು ಅಂದಾಜಿಸಲಾಗಿದ್ದು, ನವನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬ್ಯಾಂಕ್ ಅಧಿಕಾರಿಗಳು ಬ್ಯಾಂಕಿನಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ಇದುವರೆಗೂ ಪ್ರಕರಣ ದಾಖಲಾಗಿಲ್ಲ.

Previous articleಬ್ಯಾಂಕ್‌ ದರೋಡೆ ಪ್ರಕರಣ: ಮೂವರ ಬಂಧನ
Next articleಹಿಡ್ಕಲ್: ಕೇವಲ ಅರ್ಧ ಟಿಎಂಸಿ ನೀರು ಬಳಕೆ