ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ ಯಾರ ವಿರುದ್ಧ ?

0
12

ಬೆಂಗಳೂರು: ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಸರ್ಕಾರ ಹಮ್ಮಿಕೊಂಡಿರುವ ಪ್ರತಿಭಟನೆ ಯಾರ ವಿರುದ್ಧ ? ಯಾವ ಪುರುಷಾರ್ಥಕ್ಕೆ? ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರಶ್ನಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ಸಿದ್ದರಾಮಯ್ಯನವರಿಗೆ ಬಹಿರಂಗ ಪ್ರಶ್ನೆಗಳನ್ನು ಕೇಳಿದ್ದಾರೆ.

ನಾಳೆ ನೀವು ಹುಬ್ಬಳ್ಳಿಯಲ್ಲಿ ಹಮ್ಮಿಕೊಂಡಿರುವ ಪ್ರತಿಭಟನೆ ಯಾವ ಪುರುಷಾರ್ಥಕ್ಕೆ?

  • ಜನಸಾಮಾನ್ಯರ ಮೇಲೆ 48 ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಬಿದ್ದಿರುವ ಬರೆ ಮರೆಸುವ ಪ್ರತಿಭಟನೆಯೇ?
  • ಸಂವಿಧಾನ ವಿರೋಧಿಯಾಗಿ ನಡೆದುಕೊಳ್ಳುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧವೇ ಈ ಪ್ರತಿಭಟನೆಯು?
  • ರಾಜ್ಯದ ಆರ್ಥಿಕ ದುರ್ವ್ಯವಸ್ಥೆಯನ್ನು ಜನರಿಂದ ಮರೆಮಾಚಲು ಈ ಪ್ರತಿಭಟನೆ?
  • ಆಡಳಿತದಲ್ಲಿ ಭ್ರಷ್ಟಾಚಾರ ತುಂಬಿ, ಅಭಿವೃಧಿಯೆ ಕಾಣದೇ ರಾಜ್ಯವನ್ನು ಅಧೋಗತಿಗೆ ತಳ್ಳಿದ ಪ್ರತೀಕವೇ ಈ ಪ್ರತಿಭಟನೆ?
  • ಆರ್ಥಿಕವಾಗಿ ಸದೃಢವಾಗಿದ್ದ ರಾಜ್ಯವನ್ನು ಇಂದು ₹5.5 ಲಕ್ಷ ಕೋಟಿ ಸಾಲದ ಹೊರೆಯಲ್ಲಿ ದಬ್ಬಿರುವ ಸಾಧನೆಯ ಪ್ರದರ್ಶನವೇ ಈ ಪ್ರತಿಭಟನೆ?

48 ಅಗತ್ಯ ವಸ್ತುಗಳ ಬೆಲೆ ಹೆಚ್ಚಿಸಿ ಜನಸಾಮಾನ್ಯರನ್ನು ಕಬ್ಬಿನಂತೆ ಹಿಂಡುತ್ತಿರುವುದು ಕಾಂಗ್ರೆಸ್ ಸರ್ಕಾರ. ಈಗ ಈ ಪ್ರತಿಭಟನೆ ಯಾರ ವಿರುದ್ಧ ?

  • ಮೂರು ಬಾರಿ ಹಾಲಿನ ದರ ₹9 ಏರಿಕೆ; ಮೊದಲು ₹2, ಎರಡನೇ ಬಾರಿ ₹3 , ಮೂರನೇ ಬಾರಿ ₹4 ಹೆಚ್ಚಿಸಿ ರೈತರಿಗೆ ಕೊಟ್ಟದ್ದು ಚೊಂಬು.
  • -ಡಿಸೇಲ್ ಬೆಲೆ ₹ 2 ಹೆಚ್ಚಳ;
  • ಬಸ್ ಪ್ರಯಾಣ ದರ ಶೇ.20ರಷ್ಟು ಅಧಿಕಗೊಳಿಸಿ ಜನರಿಗೆ ದುಬಾರಿಯಾದ ಕಾಂಗ್ರೆಸ್ ಸರ್ಕಾರ.
  • ₹ 10 ಇದ್ದ ಪಹಣಿ ಶುಲ್ಕ ಒಮ್ಮೆಲೇ ₹25ಗೆ ಏರಿಕೆ ಮಾಡಿ ರೈತ ವಿರೋಧಿ ನಡೆ.
  • ರಾಜಧಾನಿಯಲ್ಲಿ ಕುಡಿಯುವ ನೀರಿನ ದರ ಬರೋಬ್ಬರಿ ₹ 200ರವರೆಗೆ ಹೆಚ್ಚಳ
  • ವಿದ್ಯುತ್ ಪ್ರತಿ ಯುನಿಟ್ 36 ಪೈಸೆ ಹೆಚ್ಚಿಸಿ ಜನರಿಗೆ ಕರೆಂಟ್ ಶಾಕ್ ಕೊಟ್ಟ ಸರ್ಕಾರ.
  • ₹ 20 ಇದ್ದ ಬಾಂಡ್ ಪೇಪರ್ ₹ 100ಗೆ ಏರಿಕೆ; ಮುದ್ರಾಂಕ ಶುಲ್ಕ ₹ 500 ಕ್ಕೇ ಹೆಚ್ಚಳ.
  • ರಾಜ್ಯದಲ್ಲಿ ಬೆಲೆ ಏರಿಕೆಯಿಂದ ₹75ರಿಂದ 80 ಸಾವಿರ ಕೋಟಿ ಕರ ವಸೂಲಿ.
  • ಮನೆಯ ಕಸಕ್ಕೆ ₹400 ರವರೆಗೆ ಶುಲ್ಕ ಹೆಚ್ಚಳ; 4 ಸಾವಿರ ಚದರಡಿ ಮನೆಗೆ ಮಾಸಿಕ ₹400ರಂತೆ ವಾರ್ಷಿಕ ₹4,800 ಶುಲ್ಕ ಹೆಚ್ಚಳ.
  • ಲಿಫ್ಟ್‌, ಜನರೇಟರ್‌ ಪರಿಶೀಲನೆ ಮತ್ತು ರಿನಿವಲ್‌ಗೆ ₹800 ಇದ್ದ ದರ ಇದೀಗ ₹ 5,000-₹8,000 ವರೆಗೆ ಹೆಚ್ಚಳ.

ಹೀಗೆ 48 ಅಗತ್ಯ ವಸ್ತುಗಳ ಬೆಲೆ ಹೆಚ್ಚಿಸಿ ಜನಸಾಮಾನ್ಯರನ್ನು ಕಬ್ಬಿನಂತೆ ಹಿಂಡುತ್ತಿರುವುದು ಕಾಂಗ್ರೆಸ್ ಸರ್ಕಾರ. ಈಗ ಈ ಪ್ರತಿಭಟನೆ ಯಾರ ವಿರುದ್ಧ ? ಎಂದು ಪ್ರಶ್ನಿಸಿದ್ದಾರೆ.

Previous articleಕಾಂಗ್ರೆಸ್ ಮುಖಂಡನ ಮನೆ ಮೇಲೆ ಇಡಿ ದಾಳಿ
Next articleನಾನು ಹೇಳಿದ್ದನ್ನು ನೀವು ಕೇಳಿ ಎನ್ನುವುದಷ್ಟೆ “ಮನ್ ಕಿ ಬಾತ್”