“ಹುಂಡಿಯ ಹಣ ದೇಗುಲ ಬಿಟ್ಟು ಬೇರೆಲ್ಲೂ ಹೋಗಲ್ಲ”

0
16
ಸಾಂದರ್ಭಿಕ ಚಿತ್ರ

ಬೆಂಗಳೂರು: “ಹುಂಡಿಯ ಹಣ ದೇಗುಲ ಬಿಟ್ಟು ಬೇರೆಲ್ಲೂ ಹೋಗಲ್ಲ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ದೇವಾಲಯಗಳಲ್ಲಿ ಎಲ್ಲಾ ಮೂಲಗಳಿಂದ ಸಂಗ್ರಹವಾಗುವ ಹಣವನ್ನು ದೇವಾಲಯದ ದೈನಂದಿನ ಪೂಜಾ ಕಾರ್ಯಗಳು, ವಿಶೇಷ ಪೂಜೆ, ಹಬ್ಬ, ಜಾತ್ರೆ, ಉತ್ಸವಗಳ ವೆಚ್ಚ, ದೇವಾಲಯದ ನೌಕರರ ವೇತನ ಹಾಗೂ ಮೂಲಭೂತ ಸೌಕರ್ಯಗಳ ಅಭಿವೃದ್ಧಿಯ ಉದ್ದೇಶಕ್ಕೆ ಮಾತ್ರ ಬಳಸಲ್ಪಡುತ್ತದೆ. ದೇವಾಲಯದ ಕಾಣಿಕೆ ಹುಂಡಿಯ ಒಂದು ರೂಪಾಯಿ ಕೂಡ ದೇವಾಲಯದ ಖರ್ಚು ವೆಚ್ಚ ಬಿಟ್ಟು ಅನ್ಯ ಉದ್ದೇಶಗಳಿಗೆ ಬಳಕೆಯಾಗುವುದಿಲ್ಲ ಎಂದಿದ್ದಾರೆ.

Previous articleಬೆಳಗಾವಿಯಿಂದ ಸ್ಫರ್ಧಿಸುವ ಇಂಗಿತ ವ್ಯಕ್ತಪಡಿಸಿದ ಶೆಟ್ಟರ…
Next articleಸಾರಿಗೆ ಸಿಬ್ಬಂದಿ ಕಣ್ಣಿನ ಆರೈಕೆಗೆ ‘ಆಶಾಕಿರಣ’