ಹಿರೇಬಾಗೇವಾಡಿಯಲ್ಲಿ ಸರಣಿ ಅಪಘಾತ

ಬೆಳಗಾವಿ: ಎರಡು ಲಾರಿ, ಎರಡು ಬಸ್ ಹಾಗೂ ದ್ವಿಚಕ್ರ ವಾಹನದ ನಡುವೆ ಸರಣಿ ಅಪಘಾತ ನಡೆದಿರುವ ಘಟನೆ ಹೀರೆಬಾಗೇವಾಡಿ ಬಳಿಯ ಬಡೆಕೊಳ್ಳ ಘಾಟನಲ್ಲಿ ನಡೆದಿದೆ.
ಜಿಟಿ ಜಿಟಿ ಮಳೆಯಲ್ಲಿ ಎರಡು ಲಾರಿ, ಎರಡು ಬಸ್ ಹಾಗೂ ದ್ವಿಚಕ್ರ ವಾಹನದ ನಡುವೆ ಸರಣಿ ಅಪಘಾತವಾಗಿದೆ.
ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ರೀತಿಯ ಪ್ರಾಣಾಪಾಯ ಸಂಭವಿಸಿಲ್ಲ, ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಘಟನೆಯಿಂದ ಕೆಲಹೊತ್ತು ವಾಹನಗಳು ಸಾಲು ಸಾಲಾಗಿ ನಿಂತು ಟ್ರಾಫಿಕ್ ಸಮಸ್ಯೆ ಉಂಟಾಯಿತು. ಈ ಕುರಿತು ಹೀರೆಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.