ಹಿರಿಯ ಸಾಹಿತಿ ಎಂ.ಮಲ್ಲಿಕಾರ್ಜುನಪ್ಪ ನಿಧನ

ದಾವಣಗೆರೆ: ಹಿರಿಯ ಸಾಹಿತಿ, ಸಂಶೋಧಕ, ಕನ್ನಡಪರ ಹೋರಾಟಗಾರರು ಹಾಗೂ ನಿವೃತ್ತ ಶಿಕ್ಷಕರಾದ ಎಸ್.ಮಲ್ಲಿಕಾರ್ಜುನಪ್ಪ (84) ಅವರು ಶುಕ್ರವಾರ ಬೆಂಗಳೂರಿನ ಅವರ ಪುತ್ರರಾದ ಅವಿನಾಶ್ ಕಿರಣ್ ಅವರ ನಿವಾಸದಲ್ಲಿ ನಿಧನರಾಗಿದ್ದಾರೆ.
ಮೃತರು ಪತ್ನಿ, ಓರ್ವ ಪುತ್ರ, ಸೊಸೆ , ಇಬ್ಬರು ಪುತ್ರಿಯರು, ಅಳಿಯಂದಿರು ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ದಾವಣಗೆರೆಯ ನಗರದ ಎಂ.ಸಿ.ಸಿ,ಬಿ ಬ್ಲಾಕ್ ೭ ನೇಕ್ರಾಸ್ ಹಳೇ ಆರ್.ಟಿ.ಓ. ಕಚೇರಿ ಬಳಿಯ ಅವರ ನಿವಾಸದಲ್ಲಿ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕಾಗಿ ಶನಿವಾರ ಮಧ್ಯಾಹ್ನ 12 ಗಂಟೆವರೆಗೂ ಇರಿಸಲಾಗುತ್ತದೆ. ಮೃತರ ಅಂತ್ಯಕ್ರಿಯೆಯು ಮಧ್ಯಾಹ್ನ ಮಧ್ಯಾಹ್ನ 1 ಗಂಟೆಗೆ ದಾವಣಗೆರೆ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.