ಹಿಂಸಾತ್ಮಕವಾಗಿ ಗೋಸಾಗಾಟ: ಇಬ್ಬರ ಬಂಧನ

0
46

ಸುಬ್ರಹ್ಮಣ್ಯ: ಮಾಂಸ ಮಾಡುವವರಿಗೆ ಮಾರಾಟ ಮಾಡುವ ಉದ್ದೇಶದಿಂದ ಜಾನುವಾರುಗಳನ್ನು ಹಿಂಸಾತ್ಮಕವಾಗಿ ಸಾಗಾಟ ನಡೆಸುತ್ತಿದ್ದದನ್ನು ಪತ್ತೆ ಹಚ್ಚಿದ ಸುಬ್ರಹ್ಮಣ್ಯ ಪೊಲೀಸರು ಜಾನುವಾರು ಹಾಗೂ ವಾಹನವನ್ನು ವಶಕ್ಕೆ ಪಡೆದ ಘಟನೆ ಮಾ.೫ರಂದು ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಹರಿಹರ ಪಳ್ಳತ್ತಡ್ಕದಿಂದ ಬಿಸಿಲೆ ಕಡೆಗೆ ಪಿಕಪ್ ವಾಹನದಲ್ಲಿ ಅಕ್ರಮ ಗೋ ಸಾಗಾಟ ಮಾಡುತ್ತಿರುವ ಖಚಿತ ಮಾಹಿತಿ ಪಡೆದ ಸುಬ್ರಹ್ಮಣ್ಯ ಎಸೈ ಕಾರ್ತಿಕ್ ನೇತೃತ್ವದ ಸುಬ್ರಹ್ಮಣ್ಯ ಪೊಲೀಸರು, ಸುಬ್ರಹ್ಮಣ್ಯ ಸಮೀಪದ ಕುಲ್ಕುಂದ-ಬಿಸಿಲೆ ರಸ್ತೆಯ ಕುಲ್ಕುಂದ ಎಂಬಲ್ಲಿ ಪಿಕಪ್ ವಾಹನವನ್ನು ತಡೆದು ಪರಿಶೀಲಿಸಿದ್ದು, ಪರಿಶೀಲನೆ ವೇಳೆ ಆರೋಪಿಗಳು ಮೂರು ಜಾನುವಾರುಗಳನ್ನು ಹಿಂಸಾತ್ಮಕವಾಗಿ ಕಟ್ಟಿ ಸಾಗಾಟ ನಡೆಸುತ್ತಿದ್ದು, ಯಾವುದೇ ಪರವಾನಗಿ ಹೊಂದಿರಲಿಲ್ಲ. ವಿಚಾರಣೆ ವೇಳೆ ಶನಿವಾರಸಂತೆ ಕಡೆಗೆ ಜಾನುವಾರುಗಳನ್ನು ಕಡಿದು ಮಾಂಸ ಮಾಡುವವರಿಗೆ ಮಾರಾಟ ಮಾಡಲು ಸಾಗಾಟ ನಡೆಸುತ್ತಿರುವುದಾಗಿ ಆರೋಪಿಗಳು ತಿಳಿಸಿದ್ದಾರೆ. ಪೊಲೀಸರು ಸಾಗಾಟ ನಡೆಸಿ ಪಿಕಪ್ ವಾಹನ, ಮೂರು ಜಾನುವಾರುಗಳನ್ನು ವಶಕ್ಕೆ ಪಡೆದು, ಕೃತ್ಯದಲ್ಲಿ ಭಾಗಿಯಾದ ಇಬ್ಬರು ಆರೋಪಿಗಳಾದ ಗಿರೀಶ್, ಸತೀಶ್ ಎಂಬವರನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ

Previous articleಮೀಟರ ಬಡ್ಡಿದಂಧೇಕೋರರನ್ನು ಗಡಿಪಾರು ಮಾಡಿ
Next articleಅಕ್ರಮ ಸಂಪತ್ತು ಕಂಡು ಬೆಚ್ಚಿ ಬಿದ್ದ ಲೋಕಾಯುಕ್ತ ಪೊಲೀಸರು