ಹಿಂದೂ ಮುಖಂಡರಿಗೆ ಜೀವ ಬೆದರಿಕೆ ಪೋಸ್ಟ್‌

0
70

ಮಂಗಳೂರು: ಹಿಂದೂ ಮುಖಂಡರಿಗೆ ಕಿಡಿಗೇಡಿಗಳಿಂದ ಜೀವ ಬೆದರಿಕೆ ಹಾಕಲಾಗುತ್ತಿದ್ದು, ಮುಂದಿನ ಟಾರ್ಗೆಟ್ ಶರಣ್​ ಪಂಪ್​ವೆಲ್​ ಮತ್ತು ಭರತ್ ಕುಮ್ಡೇಲ್​ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಇದು ವೈರಲ್ ಮಾಡಲಾಗಿದೆ.
ಹಿಂದೂ ಕಾರ್ಯಕರ್ತ ಹಾಗೂ ರೌಡಿಶೀಟರ್‌ ಸುಹಾಸ್‌ ಶೆಟ್ಟಿ ಹತ್ಯೆಯ ಬೆನ್ನಲ್ಲೇ ಹಿಂದೂ ಮುಖಂಡರಿಗೆ ಬೆದರಿಕೆಯ ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಮುಂದಿನ ಟಾರ್ಗೆಟ್ ಶರಣ್​ ಪಂಪ್​ವೆಲ್​ ಮತ್ತು ಭರತ್ ಕುಮ್ಡೇಲ್​ ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ಮೇ 5ರಂದು ರಾತ್ರಿ 9.30ಕ್ಕೆ ನಿನ್ನ ಸ್ಥಳದಲ್ಲೇ ಕೊಲ್ಲುವುದಾಗಿ ಕಿಡಿಗೇಡಿಗಳು ಹಿಂದೂ ಮುಖಂಡ ಭರತ್ ಕುಮ್ಡೇಲ್‌ಗೆ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮೂಲಕ ಜೀವ ಬೆದರಿಕೆಯನ್ನು ಹಾಕಲಾಗಿದೆ ,ಭರತ್ ಕುಮ್ಡೇಲ್​​ ಎಸ್​​ಡಿಪಿಐ ಮುಖಂಡ ಅಶ್ರಫ್ ಹತ್ಯೆಯ ಪ್ರಮುಖ ಆರೋಪಿ. ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳು ವೈರಲ್‌ ಆಗುತ್ತಿದ್ದಂತೆ ನಾಗರಿಕರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದ್ದು ಪೊಲೀಸರು ಸಂಬಂಧ ಪಟ್ಟವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಇನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ಪ್ರತೀಕಾರದ ಪೋಸ್ಟ್‌ಗಳ ವಿರುದ್ದ ಮಂಗಳೂರು ಪೊಲೀಸರು ಕ್ರಮ ಕೈಗೊಂಡಿದ್ದು ಸಾಮಾಜಿಕ ಜಾಲತಾಣದ ಮೇಲೆ ತೀವ್ರ ನಿಗಾ ಇಟ್ಟಿದ್ದಾರೆ, ಪ್ರತೀಕಾರದ ಸಂದೇಶ ಪೋಸ್ಟ್ ಸಂಬಂದಿಸಿದಂತೆ ಮುಲ್ಕಿ, ಉರ್ವಾ, ಬರ್ಕೆ, ಉತ್ತರ, ದಕ್ಷಿಣ, ಮೂಡಬಿದಿರೆ, ಕಾವೂರು ಠಾಣೆಯಲ್ಲಿ 15 ಕ್ಕೂ ಹೆಚ್ಚು ಪ್ರಕರಣ ದಾಖಲಾಗಿವೆ.

Previous articleನಡುರಸ್ತೆಯಲ್ಲೇ ಯುವಕನ ಬರ್ಬರ ಹತ್ಯೆ
Next articleಆಳ್ವಿಕೆ ನಡೆಸುವ ಅರಸರು ವಿಚಾರ ಮಾಡಬೇಕು