ಹಿಂದೂರಾಷ್ಟ್ರ ಇರುವ ಕಾರಣಕ್ಕಾಗಿಯೇ ಎಲ್ಲಾ ಧರ್ಮಗಳು ಇಲ್ಲಿ ನೆಲೆಸಿವೆ

0
11

ಹುಬ್ಬಳ್ಳಿ: ಭಾರತ ಈಗಾಗಲೇ ಹಿಂದೂರಾಷ್ಟವಾಗಿದ್ದು, ಮತ್ತೇ ಮಾಡುವುದೇನಿದೆ ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥರು ತಿಳಿಸಿದರು.
ಶುಕ್ರವಾರ ಬೆಳಿಗ್ಗೆ ನಗರದಲ್ಲಿ ಅಯೋಧ್ಯೆಯ ಶ್ರೀರಾಮಮಂದಿರದ ಮಂತ್ರಾಕ್ಷತೆ ನೀಡಲು ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂರಾಷ್ಟ್ರ ಇರುವ ಕಾರಣಕ್ಕಾಗಿಯೇ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ ಸೇರಿದಂತೆ ಎಲ್ಲಾ ಧರ್ಮಗಳು ಇಲ್ಲಿ ನೆಲೆಸಿವೆ. ಈ ವೈವಿದ್ಯಮಯತೆಯನ್ನು ಬೇರಾವ ರಾಷ್ಟ್ರದಲ್ಲಿ ಕಾಣಲು ಸಾಧ್ಯವಿಲ್ಲ. ಹಿಂದೂಸ್ತಾನ ಹಮಾರಾ ಎನ್ನುವ ಘೋಷಣೆ ಇಂದು ನಿನ್ನೆಯದಲ್ಲ.ಇದನ್ನು ಎಲ್ಲರೂ ಒಪ್ಪಿಕೊಂಡಾಗಿದೆ. ಕಾಂಗ್ರೆಸ್, ಬಿಜೆಪಿ ಹುಟ್ಟುವ ಮೊದಲೇ ಎಲ್ಲಾ ಧರ್ಮದವರು ಈ ರಾಷ್ಟ್ರದಲ್ಲಿದ್ದಾರೆ. ಹಿಂದೂರಾಷ್ಟ್ರದಲ್ಲಿ ಹಿಂದೂಗಳಿಗೆ ಮಾತ್ರ ಅವಕಾಶ ಎನ್ನುವ ಸಂಕುಚಿತ ಭಾವನೆ ಸರಿಯಲ್ಲ. ಎಲ್ಲರೂ ಒಟ್ಟಿಗೆ ಇರಬೇಕು ಎಂಬುದು ಈ ರಾಷ್ಟ್ರದ ಪರಿಕಲ್ಪನೆಯಾಗಿದೆ. ಸರ್ವೇ ಜನ ಸುಖಿನೋ ಭವಂತು ಎಂದು ಹೇಳುತ್ತೇವೆಯೆ ಹೊರತು ಹಿಂದೂಗಳಷ್ಟೇ ಸುಖವಾಗಿರಲಿ ಎಂದು ಹೇಳುವುದಿಲ್ಲ‌. ಇದು ಈ ರಾಷ್ಟ್ರದ ಭಾವನೆಯಾಗಿದೆ. ಇದನ್ನು ಪಾಕಿಸ್ತಾನ, ಚೀನಾದಂತಹ ಬೇರಾವ ರಾಷ್ಟ್ರದಲ್ಲಿ ಕಾಣಲು ಸಾಧ್ಯವಿಲ್ಲ ಎಂದರು.

Previous articleಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯುವ ನೈತಿಕತೆ ಕಳೆದುಕೊಂಡಿದ್ದೀರಿ
Next articleಚುನಾವಣೆಗಾಗಿ ಕರಸೇವಕರನ್ನು ಬಳಸಿಕೊಳ್ಳುತ್ತಿರುವ ಜೋಶಿ: ಶೆಟ್ಟರ ಆರೋಪ