ಹಿಂದೂಗಳ ಎದುರಿಗೆ ಹುಲಿಯ… ಮುಸ್ಲಿಮರ ಎದುರಿಗೆ ಇಲಿಯಾ…

0
20

ಬೆಂಗಳೂರು: ದಸರಾ ಹಬ್ಬಕ್ಕೆ ಧೈರ್ಯ, ಶೌರ್ಯ ಎಂದು ಪುಟಗಟ್ಟಲೆ ಜಾಹಿರಾತು ಕೊಟ್ಟು ಪೋಸ್ ಕೊಟ್ಟ ಕರ್ನಾಟಕ ಕಾಂಗ್ರೆಸ್‌ ಸರ್ಕಾರ, ಮುಸ್ಲಿಂ ಮತಾಂಧರ ಅಟ್ಟಹಾಸದ ಮುಂದೆ ಪುಕ್ಕಲುತನ ತೋರುತ್ತಿದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಗಣೇಶ ಹಬ್ಬದ ಸಂದರ್ಭದಲ್ಲಿ ನಾಗಮಂಗಲ ಹಾಗು ದಾವಣಗೆರೆಯಲ್ಲಿ ಹಿಂದೂಗಳ ಮೇಲೆ ನಡೆದ ದೌರ್ಜನ್ಯದ ಬೆನ್ನಲ್ಲೇ ಈಗ ದಸರಾ ಹಬ್ಬದ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆಯ ಸೊಲ್ಲಾಪುರ ಗ್ರಾಮದಲ್ಲಿ ಭಾನುವಾರ ರಾತ್ರಿ ದುರ್ಗಾಮತೆಯ ಮೂರ್ತಿ ವಿಸರ್ಜನೆ ವೇಳೆ ಮತಾಂಧ ಪುಂಡರು ಕಲ್ಲು ತೂರಾಟ ನಡೆಸಿದ್ದಾರೆ. ಈ ಕೋಮುಗಲಭೆಯಲ್ಲಿ 7 ಜನರಿಗೆ ತೀವ್ರ ಗಾಯವಾಗಿ, 5 ವಾಹನ ಜಖಂಗೊಂಡು, ಇಡೀ ಗ್ರಾಮದಲ್ಲಿ ಪ್ರಕ್ಷುಬ್ದ ವಾತಾವರಣವಿದ್ದರೂ ಆಕಸ್ಮಿಕ ಗೃಹ ಸಚಿವ ಡಾ. ಪರಮೇಶ್ವರ ಅವರಾಗಲಿ, ಸಿಎಂ ಸಿದ್ದರಾಮಯ್ಯ ಅವರಾಗಲಿ ಈ ಘಟನೆಯನ್ನ ಕನಿಷ್ಠ ಪಕ್ಷ ಖಂಡನೆ ಸಹ ಮಾಡಿಲ್ಲ. ಹಿಂದೂಗಳ ಎದುರಿಗೆ ಹುಲಿಯ, ಮುಸ್ಲಿಮರ ಎದುರಿಗೆ ಇಲಿಯಾ, ಇದು ಕರ್ನಾಟಕದ ಇಂದಿನ ‘ಸಿದ್ದ’ಸತ್ಯ ಎಂದಿದ್ದಾರೆ.

Previous articleಬಾವಿಗೆ ಬಿದ್ದ ಚಿರತೆಯನ್ನು ರಕ್ಷಿಸಿದ ಗ್ರಾಮಸ್ಥರು
Next articleನನ್ನ ಮೇಲಿನ ಕೇಸ್ ವಾಪಸ್ ಪಡೆದ ಬಗ್ಗೆ ದಾಖಲೆ ತೋರಿಸಿದ್ರೆ ರಾಜಕೀಯ ಸನ್ಯಾಸತ್ವ ಸ್ವೀಕರಿಸುವೆ