ಹಿಂದು ಸಂಘರ್ಷ ನಿರ್ಣಾಯಕ ಹಂತಕ್ಕೆ

0
17

ಬೆಳಗಾವಿ(ಚನ್ನಮ್ಮನ ಕಿತ್ತೂರು): ಕಳೆದ ಒಂದು ಸಾವಿರ ವರ್ಷಗಳಿಂದ ಹಿಂದೂ ಸಮಾಜದ ಮೇಲೆ ಅನೇಕರು ಆಕ್ರಮಣ ಮಾಡುತ್ತಾ ಬರುತ್ತಿದ್ದು ಕಳೆದ ಸಾವಿರ ವರ್ಷಗಳ ಹಿಂದೂ ಸಂಘರ್ಷ ಇಂದು ನಿರ್ಣಾಯಕ ಹಂತ ತಲುಪಿದೆ ಎಂದು ಕೆನರಾ ಲೋಕಸಭಾ ಸದಸ್ಯ ಅನಂತಕುಮಾರ ಹೆಗಡೆ ಹೇಳಿದರು.
ಪಟ್ಟಣದ ಭಾರತೀಯ ಜನತಾ ಪಕ್ಷದ ಕಾರ್ಯಾಲಯದಲ್ಲಿ ಬುಧವಾರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ಪಕ್ಷ ಯಾರಿಗೆ ಟಿಕೆಟ್ ಕೊಡಬೇಕು ಎಂದು ನಿರ್ಧಾರ ಮಾಡುತ್ತದೆ. ಪಕ್ಷ ಯಾರಿಗೇ ಟಿಕೆಟ್ ಕೋಡಲಿ ಮೂರನೇ ಬಾರಿ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿ ಆಗಬೇಕು. ರಾಮ ಮಂದಿರ ಯಾರೋ ದುಡ್ಡಿದ್ದವರು, ಯಾರೋ ಕೆಲವರು ಗುಂಪು ಕಟ್ಟಿಕೊಂಡು ಕಟ್ಟಿದ ಮಂದಿರವಲ್ಲ. ಭಾರತ ದೇಶದ ಹಿಂದೂ ಸಮಾಜದ ಅಸ್ಮಿತೆ ಎಂದರು.

Previous articleಮುಳುಗುತ್ತಿದ್ದ ಬೋಟ್ ಸಹಿತ ಏಳು ಮೀನುಗಾರರ ರಕ್ಷಣೆ
Next articleಮಹಾ ವಿಮಾ ಯೋಜನೆ ಕರ್ನಾಟಕಕ್ಕೆ ಬರಬಾರದು