ಮನುಷ್ಯ ಮನುಷ್ಯರ ನಡುವಿನ ಸಂಬಂಧ ಗಟ್ಟಿಗೊಳಿಸಲು ಹಾಸ್ಯ ಬಹುಮುಖ್ಯವಾಗಿದೆ
ಮಂಡ್ಯ: ಕರ್ನಾಟಕ ಚಕ್ರವರ್ತಿ ಚಿಕ್ಕದೇವರಾಜ ಒಡೆಯರ್ ವೇದಿಕೆ, ಕನ್ನಡ ಕಣ್ವ ಬಿ.ಎಂ.ಶ್ರೀಕಂಠಯ್ಯ ಮತ್ತು ನಿಘಂಟು ತಜ್ಜ ಪ್ರೊ.ಜಿ.ವೆಂಕಟಸುಬ್ಬಯ್ಯ ಮಹಾಮಂಟಪ ವೇದಿಕೆಯಲ್ಲಿ ನಡೆದ ಕನ್ನಡ ಪುಸ್ತಕೋದ್ಯಮದ ಸಂಕೀರ್ಣ ನೆಲಗಳು ಕುರಿತು ನಡೆದ ಸಮಾನಾಂತರ ವೇದಿಕೆಯ -2ನೇ ಗೋಷ್ಠಿಯಲ್ಲಿ
ವಿಮರ್ಶೆ ಎಂಬುದು ಎಲ್ಲಾ ಕಾಲಕ್ಕೂ ಪ್ರಸ್ತುತ ಮತ್ತು ಸಾರ್ವಕಾಲಿಕವಾಗಿದೆ ಮತ್ತು ಹಾಸ್ಯ ಸಾಹಿತ್ಯ ಆಧುನಿಕ ಬದುಕಿನಗೆ ಒಂದು ಔಷಧಿಯಾಗಿದೆ ಎಂದು ಪ್ರಾಧ್ಯಾಪಕರಾದ ಡಾ.ಜೆ.ಕರಿಯಪ್ಪ ಮಾಳಿಗೆ ಹೇಳಿದರು.
ಎಲ್ಲಾ ಪ್ರಕಾರದ ಸಾಹಿತ್ಯ ವಿಸ್ತೀರ್ಣಯನ್ನು ಸಾಹಿತ್ಯ ಸಂಕೀರ್ಣವಾಗಿದೆ, ಸಾಹಿತ್ಯ ಮತ್ತು ಅನುವಾದ ಸಾಹಿತ್ಯ ತುಂಬಾ ವಿಶೇಷವಾಗಿದೆ ಹಾಗೂ ಜಾಗತಿಕ ಯುಗದಲ್ಲಿ ಅನುವಾದ ಸಾಹಿತ್ಯ ಮತ್ತು ವಿಮರ್ಶೆ ಸಾಹಿತ್ಯ ಸಮಕಾಲಿನಲ್ಲಿ ವೈವಿದ್ಯಮಯವಾಗಿ ನಡೆಯುತ್ತದೆ ಎಂದರು.
ಇದೇ ವೇಳೆ ಮಾತನಾಡಿದ ಡಾ. ಕೆ.ಮಲರ್ ವಿಳಿ ಮಾತನಾಡಿ ಭಾಷೆಯ ಬೆಳವಣಿಗೆಯಲ್ಲಿ ಕಥೆ, ಕವಿತೆಗಳನ್ನು ಅನುವಾದ ಮಾಡುವಾಗ ಕೃತಿ ಮತ್ತು ಕರ್ತೃವಿನ ಮೂಲ ಆಶಯಗಳಲ್ಲಿ ಧಕ್ಕೆ ಬರದ ಹಾಗೆ ದ್ವಿಭಾಷಾ ಜ್ಞಾನ ಹೊಂದಿ ಅನುವಾದ ಮಾಡಬೇಕು ಎಂದು ಹೇಳಿದರು.
ಸಾಹಿತ್ಯ ವಿಮರ್ಶೆಯ ದಿಕ್ಕಿನ ಬಗ್ಗೆ ಮಾತನಾಡಿದ ಡಾ.ಶಿವಾನಂದ ವಿರಕ್ತಮಠ ಅನುಕರಣವಾದ, ಭಾವ ರಚನೆ ಸಿದ್ದಾಂತ, ಬ್ರಿಟಿಷ್ ಸಾಹಿತ್ಯ ಮತ್ತು ಹೊಸ ಸಾಹಿತ್ಯದಲ್ಲಿ ದಿಕ್ಕುದೆಸೆ ಮತ್ತು ವಿಮರ್ಶೆ ಅನುಸಂಧಾನ ವಿಧಾನ ವಿಭಿನ್ನ ವಾದದ್ದು ಎಂದು ಹೇಳಿದರು.
ವೈ.ವಿ.ಗುಂಡೂರಾವ್ ಮಾತಾನಾಡುತ ಹಾಸ್ಯ ಸಾಹಿತ್ಯ ಎಂಬುದು ಬುದ್ದಿಗೆ ಪ್ರೇರಣೆ, ಮನಸ್ಸಿಗೆ ರಂಜನೆ ಮತ್ತು ಸಮಾಜಕ್ಕೆ ಸುಧಾರಣೆ ಹಾಗೂ ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ ಮತ್ತು ನಗುವೆ ಔಷಧಿ, ಮನುಷ್ಯ ಮನುಷ್ಯರ ನಡುವಿ ಸಂಬಂಧ ಗಟ್ಟಿಗೊಳಿಸಲು ಹಾಸ್ಯ ಬಹುಮುಖ್ಯವಾಗಿದೆ ಎಂದರು.
ಡಾ.ಎ.ಆರ್.ಸೋಮಶೇಖರ ಮಾತನಾಡಿ ವೈದ್ಯ ಸಾಹಿತ್ಯದಲ್ಲಿ ಕಠಿಣ ಪದಗಳನ್ನು ಸರಳಗೊಳಿಸುವುದು, ಕನ್ನಡದಲ್ಲಿ ಕಲಿಕೆ ಅಗತ್ಯವಾದ ಕ್ರಮಗಳನ್ನು ಕೈಗೊಂಡರುವ ಬಗ್ಗೆ, ತಾಯಿ ಮತ್ತು ಮಕ್ಕಳ ಮರಣದ ಕಡಿಮೆ ಮಾಡಬೇಕು ಹಾಗೂ ತಾಯಿ ಮತ್ತು ಮಗುವಿನ ಪೋಷಣೆಯ ಬಗ್ಗೆ ತಿಳಿಸಿದರು.
ಡಾ.ಎಲ್.ಹನುಂಮತಯ್ಯ ಮಾತನಾಡಿ ಅನುವಾದ ಸಾಹಿತ್ಯ ವಿಶೇಷವಾಗಿ ಕ್ರಿಯಾತ್ಮಕವಾಗಿ, ಉತ್ಸಾಹ ಭರಿತ ಸಾಹಿತ್ಯ ವಾಗಿದೆ, ಕನ್ನಡಿಗರು ಅನ್ಯಾ ಭಾಷೆಯಿಂದ ಅನುವಾದ ಸಾಹಿತ್ಯವನ್ನು ಕನ್ನಡ ಸಾಹಿತ್ಯದಂತೆ ಕನ್ನಡಿಗರು ಒಪ್ಪಿಕೊಂಡಿದ್ದಾರೆ ಹಾಗೆಯೇ ನಮ್ಮ ಕನ್ನಡ ಸಾಹಿತ್ಯವನ್ನು ಆಂಗ್ಲ ಭಾಷೆ ಹೆಚ್ಚು ಅನುವಾದ ವಾಗಬೇಕು ಎಂದರು.