ಹಾಸನದ ಸಮಾವೇಶ ಕೇವಲ ಸಿದ್ದರಾಮಯ್ಯನವರ ಶಕ್ತಿ ಪ್ರದರ್ಶನ ಹೊರತು, ಬೇರೇನಿಲ್ಲ

0
121

ಕಲಬುರಗಿ: ಕಾಂಗ್ರೆಸ್ ಪಕ್ಷ ಹಾಸನದಲ್ಲಿ ಜನಕಲ್ಯಾಣ ಸಮಾವೇಶ ಮಾಡುತ್ತಿರುವುದು ಯಾವ ಪುರುಷಾರ್ಥಕ್ಕಾಗಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಪ್ರಶ್ನಿಸಿದ್ದಾರೆ.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಯಾವುದಕ್ಕಾಗಿ ಜನ ಕಲ್ಯಾಣ ಸಮಾವೇಶ ಮಾಡುತ್ತಿದೆ. ಚುನಾವಣೆ ಬಂದಾಗ ಜನರಿಗೆ ಗ್ಯಾರಂಟಿ ಹಣ ಹಾಕಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದು, ಗ್ಯಾರಂಟಿಯನ್ನು ಅವಮಾನ ಮಾಡುವುದಕ್ಕೆ ಮುಂದಾಗಿದ್ದಾರೆ ಎಂದರು.

ಕಾಂಗ್ರೆಸ್ ಆಡಳಿತಕ್ಕೆ ಬಂದಾಗಿನಿಂದ ರಾಜ್ಯದ ಜನರಿಗೆ ಏನು ಕಲ್ಯಾಣ ಮಾಡಿದ್ದಾರೆ ಅಂತಾ ಜನ ಕಲ್ಯಾಣ ಮಾಡಲು ಹೊರಟಿದ್ದಾರೆ ಎಂದು ಪ್ರಶ್ನಿಸಿದ ಅವರು, ಹಾಸನದ ಸಮಾವೇಶ ಕೇವಲ ಸಿದ್ದರಾಮಯ್ಯ ಅವರ ಶಕ್ತಿ ಪ್ರದರ್ಶನವಾಗಿದೆ ಹೊರತು, ಬೇರೇನಿಲ್ಲ ಎಂದರು.

ಉಪ ಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಗೆದ್ದಿದ್ದಕ್ಕಾಗಿ ಸಿಎಂ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನ ಬಿಡುವುದಿಲ್ಲ ಎಂಬ ಸಂದೇಶವನ್ನು ರವಾನಿಸಲು ಈ ಸಮಾವೇಶವನ್ನು ಮಾಡಲು ಮುಂದಾಗಿದ್ದಾರೆ ಎಂದ ಅವರು, ಸಿದ್ದರಾಮಯ್ಯ ಬಿಟ್ಟರೆ ಯಾರೊಬ್ಬರ ಪೋಟೋ ಸಹ ಅಲ್ಲಿ ಕಂಡಿಲ್ಲ ಎಂದರು.

Previous articleಸಿದ್ದು ಇರೋವರೆಗೂ ಡಿಕೆಸಿ ಸಿಎಂ ಅಸಾಧ್ಯ
Next articleವಿಜಯೇಂದ್ರ ವ್ಯಕ್ತಿಯಲ್ಲ ಪಕ್ಷದ ಶಕ್ತಿ…