ಹಾಲಿವುಡ್ ತಂತ್ರಜ್ಞನಿಂದ ಯಶ್​ ಬಗ್ಗೆ ಗುಣಗಾನ

0
45

ಬೆಂಗಳೂರು: ನಟ ಯಶ್‌ ಅವರ ಟಾಕ್ಸಿಕ್ ಚಿತ್ರದ ಬಗ್ಗೆ ಹಾಲಿವುಡ್​ ಖ್ಯಾತಿಯಸಾಹಸ ನಿರ್ದೇಶಕ ಜೆಜೆ ಪಿರ್ರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಪೋಸ್ಟ್‌ ಟ್ರೆಡಿಂಗ್‌ ಆಗಿದೆ ಹಾಲಿವುಡ್​ನ ‘ಐರನ್ ಮ್ಯಾನ್’, ‘ಎಕ್ಸ್ ಮ್ಯಾನ್’, ‘ಜಾನ್ ವಿಕ್ 2’ ಸೇರಿ ಹಲವಾರು ಚಿತ್ರಗಳಲ್ಲಿ ಜೆಜೆ ಪೆರ್ರಿ ಅವರು ಕೆಲಸ ಮಾಡಿದ್ದಾರೆ. ಅವರು ನಟ ಯಶ್‌ ಅಭಿನಯದ ‘ಟಾಕ್ಸಿಕ್’ ಸಿನಿಮಾಗೆ ಆಕ್ಷನ್ ದೃಶ್ಯಗಳನ್ನು ಇವರು ಸಂಯೋಜನೆ ಮಾಡಿದ್ದಾರೆ. “ನನ್ನ ಸ್ನೇಹಿತ @thenameisyash ಅವರೊಂದಿಗೆ #Toxic ಚಿತ್ರದಲ್ಲಿ ಕೆಲಸ ಮಾಡುವುದು ಸಂತೋಷವಾಯಿತು! ಭಾರತದಲ್ಲಿ ಉತ್ತಮ ಪ್ರದರ್ಶನ ನೀಡಿದೆ, ಯುರೋಪಿನಾದ್ಯಂತದ ನನ್ನ ಅನೇಕ ಆತ್ಮೀಯ ಸ್ನೇಹಿತರೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿತು, ಟಾಕ್ಸಿಕ್ ಚಿತ್ರದಲ್ಲಿ ನನ್ನ ಸ್ನೇಹಿತ ಯಶ್ ಜೊತೆ ಕೆಲಸ ಮಾಡಿದ್ದು ತುಂಬಾ ಖುಷಿ ಕೊಟ್ಟಿದೆ. ಭಾರತದಲ್ಲಿ ಇದ್ದಿದ್ದು ಖುಷಿ ಕೊಟ್ಟಿತು ಎಂದಿದ್ದಾರೆ.
ಗೀತು ಮೋಹನ್ ದಾಸ್ ನಿರ್ದೇಶನದ ಟಾಕ್ಸಿಕ್ ಚಿತ್ರವು ಕನ್ನಡ, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಬಹುಭಾಷಾ ಬಿಡುಗಡೆಗೆ ಸಿದ್ಧವಾಗಿದೆ. ಏಪ್ರಿಲ್ 2025 ರಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಬೇಕಿದ್ದ ಈ ಚಿತ್ರದ ಬಿಡುಗಡೆಯನ್ನು ಮುಂದೂಡಲಾಗಿದೆ ಮತ್ತು ಈಗ 2025 ರ ಕೊನೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

Previous articleಎಕ್ಸಪ್ರೆಸ್ ಕಾರಿಡಾರ್‌ನಲ್ಲಿ ಚನ್ನಪಟ್ಟಣದ Toys Park
Next articleರನ್ಯಾ ಪ್ರಕರಣ: ಸಿಬಿಐಗೆ ವಹಿಸಲು ಜೋಶಿ ಆಗ್ರಹ