ಹಾಡಹಗಲೇ ವ್ಯಕ್ತಿಯೊಬ್ಬನ ಕುತ್ತಿಗೆ ಸೀಳಿ ಬರ್ಬರ ಹತ್ಯೆ

0
22

ಮಂಡ್ಯ: ವ್ಯಕ್ತಿಯೊಬ್ಬನ ಕುತ್ತಿಗೆ ಸೀಳಿ ಬರ್ಬರವಾಗಿ ಹತ್ಯೆಗ್ಯೆದಿರುವ ಘಟನೆ ಸಮೀಪದ ಲಕ್ಷ್ಮೇಗೌಡನದೊಡ್ಡಿಯಲ್ಲಿ ನಡೆದಿದೆ.
ಹಣಕಾಸು ವಿಚಾರವಾಗಿ ಮೂವರ ಗುಂಪು ಗ್ರಾಮದ ಎಲ್.ಕೃಷ್ಣೆಗೌಡ (47) ರನ್ನು ಹತ್ಯೆಗೈದು ಪರಾರಿಯಾಗಿದ್ದಾರೆ. ಮದನಹಟ್ಟಿ ದೇವಾಲಯದ ಬಳಿ ಕೃಷ್ಣೇಗೌಡರ ಮೇಲೆ ಮಾರಕಾಸ್ತ್ರ ದಿಂದ ದಾಳಿ ಮಾಡಿ ದುಷ್ಕೃತ್ಯ ಎಸಗಿದ್ದು ಬೆಳ್ಳಂ ಬೆಳಗ್ಗೆ ಹರಿದ ನೆತ್ತರಿಗೆ ಗ್ರಾಮದ ಜನತೆ ಬೆಚ್ಚಿ ಬಿದ್ದಿದ್ದಾರೆ.
ಮಂಗಳವಾರ ಮುಂಜಾನೆ ಎಂದಿನಂತೆ ಡೈರಿಗೆ ತೆರಳಿ ಹಾಲು ಹಾಕಿ ಮನೆಗೆ ತೆರಳಿದ್ದ ಎಲ್ ಕೃಷ್ಣೇಗೌಡ ತೋಟದ ಬಳಿ ಎಮ್ಮೆ ಕರು ಕಟ್ಟುತ್ತಿದ್ದಾಗ ಪ್ಲಾಟಿನಂ ಬೈಕಿನಲ್ಲಿ ಬಂದ ಮೂವರು ಏಕಾಏಕಿ ಮುಗಿ ಬಿದ್ದು ಹೊಟ್ಟೆಗೆ ಇರಿದಿದ್ದು ರಕ್ತಸ್ರಾವದಿಂದ ಕೆಳಕ್ಕೆ ಬಿದ್ದಿದ್ದು ಈ ವೇಳೆ ಕುತ್ತಿಗೆ ಕುಯ್ದು ಹತ್ಯೆ ಮಾಡಿ ಪರಾರಿಯಾಗಿದ್ದಾರೆ.
ಹಣಕಾಸು ವಿಚಾರವಾಗಿ ದುಷ್ಕೃತ್ಯ ನಡೆದಿದೆ ಎಂದು ಶಂಕಿಸಲಾಗಿದ್ದು, ಕೆ ಎಂ ದೊಡ್ಡಿ ಠಾಣೆಯ ಪೊಲೀಸರು ಸ್ಥಳಕ್ಕೆ ತೆರಳಿ ಶ್ವಾನದಳ ಮತ್ತು ಬೆರಳಚ್ಚು ತಜ್ಞರ ಜೊತೆ ಪ್ರಾಥಮಿಕ ತನಿಖೆ ನಡೆಸಿ ಮೃತ ದೇಹವನ್ನು ಆಸ್ಪತ್ರೆಗೆ ಸ್ಥಳಾಂತರಿಸಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಹತ್ಯೆಯಾದ ಕೃಷ್ಣೆಗೌಡರಿಗೆ ಇಬ್ಬರು ಮಕ್ಕಳು,ಪತ್ನಿ ಹಾಗೂ ತಾಯಿ ಇದ್ದು, ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.

ಈ ಸಂಬಂಧ ಕೆ ಎಂ ದೊಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleಚಾಲಕನ ನಿಯಂತ್ರಣ ತಪ್ಪಿ ಬಸ್‌ ಪಲ್ಟಿ: 17 ಜನರಿಗೆ ಗಾಯ
Next articleಸಿದ್ದರಾಮಯ್ಯ ಅವರದ್ದು ತಾಲಿಬಾನಿ ಸರ್ಕಾರ