Home Advertisement
Home ಅಪರಾಧ ಹಸುಗೂಸು ರಸ್ತೆ ಬದಿ ಬಿಟ್ಟು ಹೋದ ದುರುಳರು

ಹಸುಗೂಸು ರಸ್ತೆ ಬದಿ ಬಿಟ್ಟು ಹೋದ ದುರುಳರು

0
108

ಮಂಗಳೂರು: ಉಜಿರೆ ಬೆಳಾಲು ಗ್ರಾಮದ ಕೊಡೊಳುಕೆರೆ ಮುಂಡ್ರೊಟ್ಟು ರಸ್ತೆ ಬದಿಯಲ್ಲಿ ಸುಮಾರು ನಾಲ್ಕು ತಿಂಗಳ ಹೆಣ್ಣು ಹಸುಗೂಸನ್ನು ಯಾರೋ ರಸ್ತೆ ಬದಿ ಬಿಟ್ಟು ಹೋಗಿರುವುದು ಇಂದು ಬೆಳಿಗ್ಗೆ ಪತ್ತೆಯಾಗಿದೆ.
ಮಗು ಅಳುವುದನ್ನು ಕೇಳಿದ ಪರಿಸರದ ನಿವಾಸಿಗಳು ಮಗುವನ್ನು ರಕ್ಷಿಸಿ ಆರೈಕೆ ಮಾಡಿ ಧರ್ಮಸ್ಥಳ ಪೊಲೀಸರಿಗೆ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳ ವಶಕ್ಕೆ ನೀಡಿದ್ದಾರೆ. ಹೆಚ್ಚಿನ ವಿವರಗಳು ತನಿಖೆಯಿಂದ ತಿಳಿದು ಬರಬೇಕಾಗಿದೆ. ಎಳೆಯ ಮಗುವನ್ನು ಅನಾಥವಾಗಿ ಬಿಟ್ಟು ಹೋದ ಪಾಪಿಗಳ ಅಮಾನವೀಯ ವರ್ತನೆಗೆ ಎಲ್ಲೆಡೆಯಿಂದ ವ್ಯಾಪಕ ಖಂಡನೆ ವ್ಯಕ್ತಗೊಂಡಿದೆ.

Previous articleಶತ್ರುಸಂಹಾರ ಯಾಗ ನಡೆಸಿದ ದರ್ಶನ್
Next articleರೇಬಿಸ್‌ಗೆ ಮಹಿಳೆ ಬಲಿ