ರಾಯಚೂರೂ: ಹಳ್ಳದಲ್ಲಿ ಬ್ಯಾಂಕ್ ಉದ್ಯೋಗಿ ಕೊಚ್ಚಿಹೋದ ಘಟನೆ ಮಂಗಳವಾರ ತಾಲೂಕಿನ ಪತ್ತೆಪೂರ ಗ್ರಾಮದಲ್ಲಿ ನಡೆದಿದೆ.
ಬಸವರಾಜ್ ಎಂಬಾತನೇ ಮಂಗಳವಾರ ರಾತ್ರಿ ಗೋಕುಲಸಾಬ್ ಹಳ್ಳ ದಾಟುವ ವೇಳೆ ಕೊಚ್ಚಿಹೋಗಿರುವ ಯುವಕ ಎಂದು ಗುರುತಿಸಲಾಗಿದೆ.
ಸದ್ಯ ಅಗ್ನಿಶಾಮಕ ದಳ, ಪೊಲೀಸ್ ಮತ್ತು ಗ್ರಾಮಸ್ಥರಿಂದ ಹುಡುಕಾಟ ಮುಂದುವರೆದಿದ್ದು, ಸ್ಥಳಕ್ಕೆ ರಾಯಚೂರು ತಹಶೀಲ್ದಾರ್ ಸುರೇಶ್ ವರ್ಮಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.