ಹಳೇಹುಬ್ಬಳ್ಳಿಯಲ್ಲಿ ಚಾಕು ಇರಿತ: ಇಬ್ಬರಿಗೆ ಗಾಯ

ಹುಬ್ಬಳ್ಳಿ: ಕ್ಷುಲಕ‌ ಕಾರಣಕ್ಕೆ ಹಳೇಹುಬ್ಬಳ್ಳಿಯಲ್ಲಿ ಚಾಕು ಇರಿತ ಘಟ‌ನೆ‌ ನಡೆದಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಸೋಮವಾರ ರಾತ್ರಿ ನಡದಿದೆ.
ಇಲ್ಲಿನ‌ ಆನಂದ ನಗರದ ಗೊಡ್ಕೆ ಪ್ಲಾಟ್‌ನಲ್ಲಿ ಘಟನೆ ನಡೆದಿದ್ದು, ಸಮೀರ್(18) ಹಾಗೂ ಚಿಕ್ಕಪ್ಪ ಜಾವೀದ್(32) ಎಂಬುವರು ಗಾಯಗೊಂಡಿದ್ದಾರೆ.
ಹಳೇ ವೈಷ್ಯಮ್ಯದ ಹಿನ್ನೆಲೆ ಚಾಕು ಇರಿತ ಘಟನೆ ನಡೆದಿದೆ. ಗಾಯಾಳುಗಳನ್ನು ಕೆಎಂಸಿಆರ್ ಐನಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಹಳೇ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ‌ ನಡೆದಿದೆ. ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.