ಹಳಿ ಮೇಲೆ ನಡೆದ ಯುವಕ, ಮೆಟ್ರೋ ರೈಲು ಕೆಲ ಕಾಲ ಸ್ಥಗಿತ

0
19

ಬೆಂಗಳೂರು: ಮೆಟ್ರೊ ಹಳಿ ಮೇಲೆ ಯುವಕ ಓಡಾಡಿದ್ದರಿಂದ 27 ನಿಮಿಷ ಮೆಟ್ರೊ ಸ್ಥಗಿತವಾದ ಘಟನೆ ನಡೆದಿದೆ.
ಮಂಗಳವಾರ (ಮಾರ್ಚ್ 12) ಮಧ್ಯಾಹ್ನ ಹಳಿಗಳ ಬಳಿ ನಡೆದುಕೊಂಡು ಹೊರಟಿದ್ದ. ಅದನ್ನು ನೋಡಿದ ಸಿಬ್ಬಂದಿ, ಕೂಡಲೇ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದರು. ಕೂಡಲೇ ಆ ವ್ಯಕ್ತಿಯಲ್ಲಿ ಅಲ್ಲಿಂದ ಸ್ಥಳಾಂತರಿಸಲು 27 ನಿಮಿಷಗಳ ಕಾಲ ಮೆಟ್ರೋ ಸೇವೆಗಳನ್ನು ಸ್ಥಗಿತಗೊಳಿಸಲಾಯಿತು, ಮೈಸೂರು ರಸ್ತೆಯಿಂದ ಚಲಘಟ್ಟ ನಿಲ್ದಾಣವರೆಗಿನ ಮೆಟ್ರೊ ಸಂಚಾರ ಸ್ಥಗಿತಗೊಂಡಿತ್ತು ಎಂದು ಮೆಟ್ರೋ ಮೂಲಗಳು ತಿಳಿಸಿವೆ. ನಂತರ ವಿದ್ಯುತ್ ಸಂಪರ್ಕ ಪುನಃ ನೀಡಲಾಯಿತು. ನಂತರವೇ, ರೈಲುಗಳ ಸಂಚಾರ ಆರಂಭವಾಯಿತು.

Previous articleಆರೋಪಿ ಬಾಂಬರ್ ಮನೆ ಪತ್ತೆ?
Next articleಸೆ.17ರಂದು ಹೈದರಾಬಾದ್ ವಿಮೋಚನಾ ದಿನಾಚರಣೆ ಆಚರಿಸಲು ಕೇಂದ್ರ ಸರ್ಕಾರ ಘೋಷಣೆ