ಹಳಿ ತಪ್ಪಿದ ಸಬರಮತಿ ಎಕ್ಸ್‌ಪ್ರೆಸ್ ರೈಲು

0
11

ಕಾನ್ಪುರ: ಸಬರಮತಿ ಎಕ್ಸ್‌ಪ್ರೆಸ್ ಪ್ಯಾಸೆಂಜರ್ ರೈಲಿನ 20 ಬೋಗಿಗಳು ಹಳಿತಪ್ಪಿದ ಘಟನೆ ನಡೆದಿದೆ.


ನಸುಕಿನ ಜಾವ 2:30 ಕ್ಕೆ ಉತ್ತರ ಪ್ರದೇಶದ ಕಾನ್ಪುರ ಮತ್ತು ಭೀಮ್‌ಸೇನ್ ನಿಲ್ದಾಣದ ನಡುವೆ ಸಬರಮತಿ ಎಕ್ಸ್‌ಪ್ರೆಸ್ ಪ್ಯಾಸೆಂಜರ್ ರೈಲಿನ 20 ಕ್ಕು ಹೆಚ್ಚು ಬೋಗಿಗಳು ಹಳಿತಪ್ಪಿವೆ ಎಂದು ರೈಲ್ವೆ ಮಂಡಳಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆದರೆ ಘಟನೆಯಿಂದ ಯಾವುದೇ ಪ್ರಾಣ ಹಾನಿ ಬಗ್ಗೆ ವರದಿಯಾಗಿಲ್ಲ ಎಂದು ತಿಳಿದುಬಂದಿದೆ. ಕೆಲ ದೊಡ್ಡ ಕಲ್ಲುಗಳು ಎಂಜಿನ್‌ನ ಮುಂಭಾಗಕ್ಕೆ ಬಡಿದಿವೆ, ಇದರಿಂದ ರೈಲಿನ ಮುಂಭಾಗಕ್ಕೆ ಹಾನಿಯಾಗಿದ್ದು ಕೊಂಚ ಬಾಗಿದೆ ಎಂದು ಲೋಕೋ ಪೈಲಟ್ ಹೇಳಿದ್ದಾರೆ ಎಂದು ರೈಲ್ವೆ ಅಧಿಕಾರಿ ತಿಳಿಸಿದ್ದಾರೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ರೈಲು ಹಳಿತಪ್ಪಿದ ಕಾರಣ ಏಳು ರೈಲುಗಳನ್ನು ರದ್ದುಗೊಳಿಸಲಾಗಿದ್ದು ಮೂರು ಮಾರ್ಗಗಳನ್ನು ಬದಲಾಯಿಸಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ. ವಾರಣಾಸಿಯಿಂದ ಅಹಮದಾಬಾದ್ ಕಡೆಗೆ ತೆರಳುತ್ತಿದ್ದ ವೇಳೆ ರೈಲು ಕಾನ್ಪುರ ಮತ್ತು ಭೀಮಸೇನ್ ರೈಲು ನಿಲ್ದಾಣದ ರೈಲ್ವೆ ದಾರಿಯಲ್ಲಿ ಹಳಿ ತಪ್ಪಿದೆ. ಈಗಾಗಲೇ ಸಿಬ್ಬಂದಿಗಳು ಹಾಗೂ ಅಧಿಕಾರಿಗಳು ಸೇರಿದಂತೆ ಅನೇಕರು ಪರಿಹಾರ ಕಾರ್ಯಚರಣೆ ನಡೆಸುತ್ತಿದ್ದಾರೆ. ಇನ್ನು ಘಟನೆಯ ಬಗ್ಗೆ ವಿವರಿಸಿದ ಲೊಕೊ ಪೈಲಟ್ ಬಂಡೆಗಳು ರೈಲಿನ ಮೇಲೆ ಬಿದ್ದ ಕಾರಣ ಇಂಜಿನ್​​​ಗಳು ಡ್ಯಾಮೆಜ್​​ ಆಗಿದೆ. ಕಾನ್ಪುರ ರೈಲು ನಿಲ್ದಾಣಕ್ಕೆ ಪ್ರಯಾಣಿಕರನ್ನು ಸಾಗಿಸಲು ಬಸ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

Previous articleಭಗವಂತನ ಕೃಪೆಯಿಂದ ಸಕ್ಸಸ್ ಆದಿವಿ: ಕನ್ಹಾಯ್ಯಾ ನಾಯ್ಡು
Next articleಹೋರಾಟ ನಿಲ್ಲಿಸುವುದಿಲ್ಲ: ವಿನೇಶ್​ ಫೋಗಟ್‌ ಭಾವನಾತ್ಮಕ ಪೋಸ್ಟ್